ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘದ ಮುಂದೆ ಯೂರಿಯಾ ಗೊಬ್ಬರ ಖರೀದಿಸಲು ರೈತರು ಸಾಲುಗಟ್ಟಿ ನಿಂತಿದ್ದರು
ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಬುಧವಾರ ರೈತರು ಮುಗಿಬಿದ್ದು ಯೂರಿಯಾ ಗೊಬ್ಬರ ಖರೀದಿಸಿದರು.
ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ ಮಂಗಳವಾರ ರಾತ್ರಿ 650 ಚೀಲ ಯೂರಿಯಾ ಗೊಬ್ಬರ ಪೂರೈಕೆಯಾಗಿತ್ತು. ವಿಷಯ ತಿಳಿದ ನೂರಾರು ರೈತರು, ಮಹಿಳೆಯರು ಬೆಳಿಗ್ಗೆಯೇ ಸೊಸೈಟಿ ಮುಂದೆ ಸಾಲಗಟ್ಟಿ ನಿಂತಿದ್ದರು.
ಸರದಿ ಸಾಲಿನಲ್ಲಿ ನಿಂತಿದ್ದ ರೈತರ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ತಲಾ ಎರಡು ಚೀಲ ಯೂರಿಯಾ ವಿತರಿಸಲಾಯಿತು.
‘ನಿರಂತರ ಜಿಟಿಜಿಟಿ ಮಳೆ, ತಂಪು ಹವೆಯಿಂದ ಜೋಳ, ಮೆಕ್ಕೆಜೋಳ ಬೆಳೆಗಳು ಬಿಳಿವರ್ಣಕ್ಕೆ ತಿರುಗಿವೆ. ಶೀತಪೀಡಿತ ಬೆಳೆಗಳನ್ನು ರಕ್ಷಿಸಲು ಯೂರಿಯಾ ಬೇಕು. ಕೈಯಲ್ಲಿ ಹಣ ಹಿಡಿದು ತಿರುಗಾಡಿದರೂ ಗೊಬ್ಬರ ಸಿಗುತ್ತಿಲ್ಲ. ರೈತರಿಗೆ ಅಗತ್ಯವಿರುವ ಬೀಜ, ಗೊಬ್ಬರ ಪೂರೈಸದೇ ಸರ್ಕಾರ ನಿರ್ಲಕ್ಷಿಸಿದೆ’ ಎಂದು ರೈತರೊಬ್ಬರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.