ಹೂವಿನಹಡಗಲಿ: ಇಲ್ಲಿನ ರುದ್ರಾಂಬ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.
ಗ್ರಾಮದೇವತೆ ಮಹಾದ್ವಾರದ ಬಳಿ ಜಾನಪದ ಉತ್ಸವ ಮೆರವಣಿಗೆಗೆ ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ಪ್ರಾಚಾರ್ಯ ಕೆ. ರುದ್ರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ‘ಮೂಲ ಜಾನಪದ ನಮ್ಮಿಂದಲೇ ಕೊನೆಯಾಗಬಾರದು. ಮುಂದಿನ ತಲೆಮಾರಿಗೂ ಅದನ್ನು ಪರಿಚಯಿಸಬೇಕು. ಜಾನಪದ ಹಾಡು, ನೃತ್ಯ, ಹಂತಿ ಪದ, ಬೀಸುವ ಪದದ ಜತೆಗೆ ನಮ್ಮ ಹಿರಿಯರ ಉಡುಗೆ, ತೊಡುಗೆ, ಆಹಾರ ಪದ್ಧತಿಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು’ ಎಂದು ಹೇಳಿದರು.
ಅಲಂಕೃತ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಮೆರವಣಿಗೆ ಮುಖ್ಯ ಬೀದಿಯಲ್ಲಿ ಸಾಗಿತು. ವಿದ್ಯಾರ್ಥಿಗಳು ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿದರು. ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು. ಪ್ರಾಚಾರ್ಯ ಎಂ. ವಿಜಯಕುಮಾರ್, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಟಿ. ಮಹಾಂತೇಶ, ಆರ್. ಫಕ್ಕೀರಪ್ಪ, ಎಚ್.ಡಿ. ಜಗ್ಗೀನ್, ಎಸ್. ನಸ್ರೀನ್, ಕೆ. ರೆಹಮಾನ್, ಎಂ. ಶಾಂತರಾಜ, ಕಂಪ್ಲಿ ರಾಘವೇಂದ್ರ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.