
ಸಿರುಗುಪ್ಪ: ನಗರದ ಶಾಸಕರ ಗೃಹ ಕಚೇರಿಯಲ್ಲಿ ಸಿರುಗುಪ್ಪ ಪುರಸಭೆ ಮಾಜಿ ಅಧ್ಯಕ್ಷ ಟಿ.ನಾಂಚಾರಯ್ಯ ಮತ್ತು ಬೆಂಗಲಿಗರು ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಬಿ.ಎಂ.ನಾಗರಾಜ ಅವರು ಕಾಂಗ್ರೆಸ್ ಭಾವುಟ ನೀಡಿ ಸ್ವಾಗತಿಸಿದರು.
ಪುರಸಭೆ ಮಾಜಿ ಸದಸ್ಯ ಇಸಾಕ್, ಮುಖಂಡ ಹಿರಹಾಳ್ ಶೀನಪ್ಪ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ದಮ್ಮೂರು ಸೋಮಪ್ಪ, ಮುಖಂಡರಾದ ಹುಸೇನ್ ಪೀರ, ಮರಿರಾಜ್ ಗೌಡ, ಗಾಳೆಪ್ಪ, ನಡವಿ ಪಕೀರಪ್ಪ, ನಾಡಂಗ ವೆಂಕೋಬ, ಲಿಂಗನಗೌಡ, ಪೂಜಾರಿ ಮಲ್ಲಿಕಾರ್ಜುನ, ಗೋಪಾಲ, ಬಿ. ಸಣ್ಣವೆಂಕಟೇಶ್, ಎಚ್. ಗಣೇಶ್, ಶಫಿ, ಶಿವಪ್ಪ, ದಮ್ಮೂರು ಮಂಜುನಾಥ್, ಖಜಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.