ಹರಪನಹಳ್ಳಿ: ತಾಲ್ಲೂಕಿನ ಹಾರಕನಾಳುನಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನ ಕೊಟ್ಟ ಇಬ್ಬರು ಆರೋಪಿಗಳು ₹10 ಲಕ್ಷ ಪಡೆದು ವಂಚಿಸಿದ್ದಾರೆ.
ತುಮಕೂರು ಮೂಲದ ಹನುಮಂತರಾಯಪ್ಪ ಅವರಿಗೆ ರಮೇಶ್ ಮತ್ತು ಮತ್ತೊಬ್ಬ ಆರೋಪಿ ಕರೆ ಮಾಡಿ, ಸುಮಾರು 4.5 ಕೆ.ಜಿಯಷ್ಟು ಹಳೆಯ ಕಾಲದ ಬಂಗಾರ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ನಂಬಿಸಿದ್ದಾನೆ. ಹರಪನಹಳ್ಳಿಗೆ ಬಂದ ಅವರಿಗೆ, ನಕಲಿ ಬಂಗಾರ ಕೊಟ್ಟು, ಹಣ ಪಡೆದು ಪರಾರಿಯಾಗಿದ್ದಾರೆ. ಅವುಗಳನ್ನು ಪರೀಕ್ಷಿಸಿದಾಗ ನಕಲಿ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನುಮಂತರಾಯಪ್ಪ ನೀಡಿದ ದೂರಿನನ್ವಯ ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.