ADVERTISEMENT

ಕಂಪ್ಲಿ | ವಿವಿಧೆಡೆ ಮನಸೆಳೆದ ಮೋದಕಪ್ರಿಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:42 IST
Last Updated 29 ಆಗಸ್ಟ್ 2025, 6:42 IST
ಕಂಪ್ಲಿಯ ಡಾ. ಅಂಬೇಡ್ಕರ್ ವೃತ್ತದ ಬಳಿ ಲಯನ್ಸ್ ಗ್ರೂಪ್‌ನವರು ಕಾಳಿಮಾತಾ ಗಣಪತಿ ಪ್ರತಿಷ್ಠಾಪಿಸಿದ್ದಾರೆ
ಕಂಪ್ಲಿಯ ಡಾ. ಅಂಬೇಡ್ಕರ್ ವೃತ್ತದ ಬಳಿ ಲಯನ್ಸ್ ಗ್ರೂಪ್‌ನವರು ಕಾಳಿಮಾತಾ ಗಣಪತಿ ಪ್ರತಿಷ್ಠಾಪಿಸಿದ್ದಾರೆ   

ಕಂಪ್ಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವೈವಿಧ್ಯಮಯ ಗಣಪತಿ ಮೂರ್ತಿಗಳನ್ನು ಬುಧವಾರ ಪ್ರತಿಷ್ಠಾಪಿಸಿದ್ದು, ಸಾರ್ವಜನಿಕರ ಗಮನಸೆಳೆಯುತ್ತಿವೆ.

ಮೂರ್ತಿಗಳಿಗೆ ವಿಶೇಷ ಪೂಜೆ, ಅರ್ಚನೆ ಮತ್ತು ಮೋದಕ ಸಮರ್ಪಣೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆತಿದೆ. ಎಲ್ಲೆಡೆ ಭಕ್ತಿಭಾವ ಮತ್ತು ಸಂಭ್ರಮ ಮನೆ ಮಾಡಿದೆ. ಹಲವೆಡೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಜನರು ಕಣ್ತುಂಬಿಕೊಂಡರು.

ಪಟ್ಟಣದಲ್ಲಿ ಎವರ್ ಗ್ರೀನ್ ಫ್ರೆಂಡ್ಸ್ ವತಿಯಿಂದ ಮಹಾರಾಜ ಗಣಪತಿ, ವೀರ ಕಂಪಿಲರಾಯ ವಿನಾಯಕ ಮಂಡಳಿಯ ಕಂಪ್ಲಿ ವೀರರಾಯ ಗಣಪತಿ, ಎಸ್.ಎನ್. ಪೇಟೆ ಬಾಯ್ಸ್ ಪ್ರತಿಷ್ಠಾಪಿಸಿದ 2025ರ ಆರ್.ಸಿ.ಬಿ ಕಪ್ ಎತ್ತಿ ಹಿಡಿದ ವಿನಾಯಕ, ಮಡ್ಡಿಕಟ್ಟೆಯ ಶಿವ ಗಜಾನನ ಯುವಕ ಮಂಡಳಿಯ ಸುಖಾಸೀನ ಗಣಪತಿ, ಹಿಂದೂ ಮಹಾ ಮಂಡಳಿಯ ರಾಜಾಸನ ವಿಘ್ನೇಶ್ವರ, ಶ್ರೀಸಿದ್ಧಿ ವಿನಾಯಕ ಉತ್ಸವ ಸಮಿತಿಯ ಪುರಿ ಜಗನ್ನಾಥ ಗಣಪತಿ, ಸರಾಫ್ ವರ್ತಕರ ಮತ್ತು ಕೆಲಸಗಾರರ ಸಂಘದ ಮಹಾರಾಜ ಗಣಪತಿ, ಹಿಂದೂ ಸಾಮ್ರಾಟ್ ಗಣಪತಿ ಮಂಡಳಿಯ ಗಜಮುಖ ಗಣಪತಿ, ಅಂಬೇಡ್ಕರ್ ಯುವಕ ಮಂಡಳಿಯ ಶಿವ ತಾಂಡವ ಗಣಪತಿ, ಲಯನ್ಸ್ ಗ್ರೂಪ್‌ನಿಂದ ಕಾಳಿಮಾತಾ ಗಣಪತಿ, ಭಗತ್‍ಸಿಂಗ್ ಬಾಯ್ಸ್‌ ವತಿಯಿಂದ ಅಂಜನಾದ್ರಿ ಗಣಪತಿ, ಹಾರ್ಟ್‍ಬೀಟ್ ಗ್ರೂಪ್‌ನಿಂದ ರಥಾರೂಢ ಛದ್ಮವೇಷಧಾರಿ ಗಣಪತಿ ಸೇರಿದಂತೆ ವಿವಿಧ ರೂಪದ ಗಣಪತಿ ವಿಗ್ರಹಗಳು ಜನಮನಸೂರೆಗೊಂಡವು.

ADVERTISEMENT

ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 153 ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿದ್ದು, ಪಟ್ಟಣದಲ್ಲಿ 66, ಗ್ರಾಮೀಣ ಪ್ರದೇಶದಲ್ಲಿ 87 ಗಣಪತಿಗಳನ್ನು ಸ್ಥಾಪಿಸಲಾಗಿದೆ. ಐ.ಆರ್.ಬಿ 23 ಜನರ ಒಂದು ಬೆಟಾಲಿಯನ್, 25 ಗೃಹರಕ್ಷಕದಳ ಸದಸ್ಯರು ಸೇರಿ ಸ್ಥಳೀಯ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.


ಕಂಪ್ಲಿ ಎಸ್.ಎನ್. ಪೇಟೆ ಬಾಯ್ಸ್ 2025ರ ಆರ್.ಸಿ.ಬಿ ಕಪ್ ವಿನಾಯಕ ಪ್ರತಿಷ್ಠಾಪಿಸಿದ್ದಾರೆ
ಕಂಪ್ಲಿ ವಾರದ ಸಂತೆ ಮಾರುಕಟ್ಟೆ ರಸ್ತೆ ಬಳಿ ಶ್ರೀ ಸಿದ್ಧಿ ವಿನಾಯಕ ಉತ್ಸವ ಸಮಿತಿಯವರು ಪುರಿ ಜಗನ್ನಾಥ ಗಣಪತಿ ಪ್ರತಿಷ್ಠಾಪಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.