ADVERTISEMENT

ಹರಪನಹಳ್ಳಿ | ಗಣೇಶ ವಿಸರ್ಜನೆ: ಮುಸ್ಲಿಂ ಮುಖಂಡರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:22 IST
Last Updated 11 ಸೆಪ್ಟೆಂಬರ್ 2024, 13:22 IST
ಹರಪನಹಳ್ಳಿಯಲ್ಲಿ ಬಾಪೂಜಿನಗರದ ಯುವಕರು ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು
ಹರಪನಹಳ್ಳಿಯಲ್ಲಿ ಬಾಪೂಜಿನಗರದ ಯುವಕರು ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು   

ಹರಪನಹಳ್ಳಿ : ಪಟ್ಟಣ ಸೇರಿ ಹಲವೆಡೆ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ಬುಧವಾರ ಅದ್ದೂರಿಯಾಗಿ ಜರುಗಿತು.

ಬಾಪೂಜಿ ನಗರದಿಂದ ತೆರೆದ ವಾಹನದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಬಾಣಗೆರೆಯ ಗರಡಿ ಮುಂಭಾಗದ ಮೂಲಕ ಹಾದು ಹೋಗುವಾಗ ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಮಾದಿಗ ಸಮಾಜ ಮತ್ತು ಮುಸ್ಲಿಂ ಸಮಾಜಗಳ ಮುಖಂಡರು ಪೋಲಿಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಸ್ಪರ ಸನ್ಮಾನಿಸಿಕೊಂಡು ಗೌರಿ ಗಣೇಶ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ವೀಕ್ಷಣೆಗೆ ನೂರಾರು ಮಹಿಳೆಯರು ನೆರೆದಿದ್ದರು. ಗೌಳೇರ ಓಣಿಯ ರಸ್ತೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶನನ್ನು ಹಾಲು ಮಾರುವ ಆಟೊದಲ್ಲಿ ಮೆರವಣಿಗೆ ಕರೆದೊಯ್ದು ಗೌಳಿಗರ ಕುಟುಂಬಗಳು ಗಮನ ಸೆಳೆದವು. 100ಕ್ಕೂ ಹೆಚ್ಚು ಮೂರ್ತಿಗಳ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗಳಿಂದ ಹೊರಹೊಮ್ಮುತ್ತಿದ್ದ ಸಿನಿಮಾ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು.

ADVERTISEMENT
ಹರಪನಹಳ್ಳಿ ಪಟ್ಟಣದ ಬಾಪೂಜಿನಗರದ ಮಾದಿಗ ಸಮಾಜದ ಮುಖಂಡರು ಬಾಣಗೆರೆಯಲ್ಲಿ ಮೆರವಣಿಗೆ ತೆರಳುವಾಗ ಮುಸ್ಲಿಂ ಧರ್ಮದ ಮುಖಂಡರನ್ನು ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.