ADVERTISEMENT

ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 2:48 IST
Last Updated 1 ಫೆಬ್ರುವರಿ 2026, 2:48 IST
ಹೂವಿನಹಡಗಲಿ ತಾಲ್ಲೂಕು ಬಾವಿಹಳ್ಳಿಯ ಅಕ್ಕನ ಬಳಗದವರು ಗವಿಮಠದ ಜಾತ್ರೆಯ ದಾಸೋಹಕ್ಕೆ ಕರ್ಚಿಕಾಯಿ ಸಿದ್ದಪಡಿಸುತ್ತಿರುವುದು
ಹೂವಿನಹಡಗಲಿ ತಾಲ್ಲೂಕು ಬಾವಿಹಳ್ಳಿಯ ಅಕ್ಕನ ಬಳಗದವರು ಗವಿಮಠದ ಜಾತ್ರೆಯ ದಾಸೋಹಕ್ಕೆ ಕರ್ಚಿಕಾಯಿ ಸಿದ್ದಪಡಿಸುತ್ತಿರುವುದು   

ಹೂವಿನಹಡಗಲಿ: ಇಲ್ಲಿನ ಶಾಖಾ ಗವಿಮಠದಲ್ಲಿ ಫೆ. 3 ರಿಂದ 7ರ ವರೆಗೆ ಜರುಗಲಿರುವ ಗವಿಸಿದ್ದೇಶ್ವರ ಸ್ವಾಮಿ 31ನೇ ಜಾತ್ರಾ ಮಹೋತ್ಸವದ ದಾಸೋಹಕ್ಕಾಗಿ ವಿವಿಧ ಗ್ರಾಮಗಳ ಭಕ್ತರು ಸಿಹಿ ಖಾದ್ಯ ತಯಾರಿಸಿ ಕೊಡುತ್ತಿದ್ದಾರೆ.

ಈ ವರ್ಷದ ಜಾತ್ರೆಯ ದಾಸೋಹಕ್ಕೆ ಬಾವಿಹಳ್ಳಿ ಗ್ರಾಮದ ಅಕ್ಕನ ಬಳಗದ 30ಕ್ಕೂ ಹೆಚ್ಚು ಸದಸ್ಯೆಯರು ಕಳೆದ ಮೂರ್ನಾಲ್ಕು ದಿನಗಳಿಂದ ಬೆಲ್ಲದ ಕರ್ಚಿಕಾಯಿ ಸಿದ್ದಪಡಿಸುತ್ತಿದ್ದಾರೆ. 15 ಸಾವಿರ ಕರ್ಚಿಕಾಯಿ ತಯಾರಿಸಿ ಸೋಮವಾರ ಮಠಕ್ಕೆ ಸಮರ್ಪಿಸಲಿದ್ದಾರೆ.

ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಅವರು ಶನಿವಾರ ಬಾವಿಹಳ್ಳಿಗೆ ಭೇಟಿ ನೀಡಿ ಅವರ ಸೇವೆಯನ್ನು ಪ್ರಶಂಸಿಸಿದರು.

ADVERTISEMENT
ಹೂವಿನಹಡಗಲಿ ತಾಲ್ಲೂಕು ಬಾವಿಹಳ್ಳಿಯ ಅಕ್ಕನ ಬಳಗದವರು ಗವಿಮಠದ ಜಾತ್ರೆಯ ದಾಸೋಹಕ್ಕೆ ಕರ್ಚಿಕಾಯಿ ಸಿದ್ದಪಡಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.