ADVERTISEMENT

ಗಂಡೋರಿ ಜಲಾಶಯ:ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 6:43 IST
Last Updated 1 ಸೆಪ್ಟೆಂಬರ್ 2021, 6:43 IST
ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ (ಬೆಳಕೋಟಾ) ಜಲಾಶಯದಿಂದ ಮಂಗಳವಾರ ನೀರು ಹೊರ ಬಿಡಲಾಯಿತು
ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ (ಬೆಳಕೋಟಾ) ಜಲಾಶಯದಿಂದ ಮಂಗಳವಾರ ನೀರು ಹೊರ ಬಿಡಲಾಯಿತು   

ಕಮಲಾಪುರ: ತಾಲ್ಲೂಕಿನ ಗಂಡೋರಿ ನಾಲಾ (ಬೆಳಕೋಟಾ) ಜಲಾಶಯದಿಂದ ಕಳೆದೆರಡು ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ ಎಂದು ಸಹಾಯಕ ಎಂಜಿನಿಯರ್‌ ಶ್ರೀಕಾಂತ ಹೊಂಡಾಳೆ ತಿಳಿಸಿದ್ದಾರೆ.

ಸೋಮವಾರ 6 ಗೇಟ್‌ಗಳ ಮೂಲಕ 2200 ಕ್ಯೂಸೆಕ್, ಮಂಗಳವಾರ 3 ಗೇಟ್‌ಗಳ ಮೂಲಕ 1100 ಕ್ಯೂಸೆಕ್ಸ ನೀರು ಹೊರಬಿಡಲಾಗಿದೆ.

ಗಂಡೋರಿ ನಾಲ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ 800 ಕ್ಯೂಸೆಕ್ ಒಳ ಹರಿವಿದೆ. 1.475 ಟಿಎಂಸಿ ನೀರು ಸಂಗ್ರಹಗೊಂಡಿದೆ. ಭರ್ತಿಯಾಗಲು 2.3 ಮೀಟರ್‌ ಬಾಕಿ ಇದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.