ADVERTISEMENT

ಮತದಾರರ ಪಟ್ಟಿಯಿಂದ ಹೆಸರು ಮಾಯ: ಮೃತರಾಗಿದ್ದು ತಂದೆ, ತೆಗೆದಿದ್ದು ಪುತ್ರನದು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 5:29 IST
Last Updated 27 ಡಿಸೆಂಬರ್ 2020, 5:29 IST
ಸಂಡೂರು ತಾಲ್ಲೂಕಿನ ತೋರಣಗಲ್ ಮತಗಟ್ಟೆಯಲ್ಲಿ‌ ಮತದಾರರ ಕೈಗೆ ಸ್ಯಾನಿಟೈಸರ್ ಸಿಂಪಡಣೆ- ಸಾಂದರ್ಭಿಕ ಚಿತ್ರ
ಸಂಡೂರು ತಾಲ್ಲೂಕಿನ ತೋರಣಗಲ್ ಮತಗಟ್ಟೆಯಲ್ಲಿ‌ ಮತದಾರರ ಕೈಗೆ ಸ್ಯಾನಿಟೈಸರ್ ಸಿಂಪಡಣೆ- ಸಾಂದರ್ಭಿಕ ಚಿತ್ರ   

ಹಗರಿಬೊಮ್ಮನಹಳ್ಳಿ: ಎಪಿಎಂಸಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ತಾಲ್ಲೂಕಿನ ವಲ್ಲಭಾಪುರ ಗ್ರಾಮದ ಬಿ.ಹುಲುಗಪ್ಪ ಮತಗಟ್ಟೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಗುರುತಿನ ಚೀಟಿಯೊಂದಿಗೆ ತೆರಳಿದ್ದ ಅವರು ಮತಗಟ್ಟೆಯಲ್ಲಿ ಅಧಿಕಾರಿಗಳುನಿಮ್ಮ ಹೆಸರು ತೆಗೆಯಲಾಗಿದೆ ಎಂದು ಹೇಳಿದರು.

ಈಚೆಗೆ ಹುಲುಗಪ್ಪ ಅವರ ತಂದೆ ಬಟಾರಿ ಹುಲುಗಪ್ಪ ಮೃತರಾಗಿದ್ದರು, ಆದರೆ ತಂದೆಯ ಬದಲಾಗಿ ಮಗನ ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ವಲ್ಲಭಾಪುರ ಬಿಎಲ್ಒ ರಾಮಪ್ಪ ತಿಳಿಸಿದರು. ಈ ಕುರಿತಂತೆ ತಾಲ್ಲೂಕು ಕಚೇರಿಗೆ ಮಾಹಿತಿ ನೀಡಲಾಗಿತ್ತು, ಆದರೂ ಬದುಕಿರುವವರ ಹೆಸರನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಗ್ರಾಮ ಪಂಚಾಯ್ತಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ತಾಲ್ಲೂಕು ಆಡಳಿತ ಮತದಾನ ಮಾಡುವುದಕ್ಕೆ ವಂಚಿತರನ್ನಾಗಿ ಮಾಡಿದೆ ಎಂದು ಮಾರುತೆಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೆಲಕಾಲ ಮತದಾನ ಕೇಂದ್ರದಲ್ಲಿ ಗೊಂದಲ‌ ಸೃಷ್ಟಿಯಾಗಿತ್ತು. ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದರು.

ADVERTISEMENT

ಗ್ರಾಮದ ತಾರಳ್ಳಿ ದ್ಯಾಮವ್ವ ಎನ್ನುವವರ ಹೆಸರನ್ನೂ ತೆಗೆಯಲಾಗಿದೆ. ಇವರ ಪತಿ ದುರುಗಪ್ಪ ನಿಧನರಾಗಿದ್ದರು. ಪತಿಯ ಬದಲಾಗಿ ಪತ್ನಿಯ ಹೆಸರನ್ನು ತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.