ADVERTISEMENT

ಗನ್‌ ಸಂಸ್ಕೃತಿ ಬಂದಿದ್ದೇ ರೆಡ್ಡಿಯಿಂದ: ನಾರಾ ಪ್ರತಾಪರೆಡ್ಡಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:27 IST
Last Updated 3 ಜನವರಿ 2026, 5:27 IST
<div class="paragraphs"><p>ನಾರಾ ಪ್ರತಾಪರೆಡ್ಡಿ</p></div>

ನಾರಾ ಪ್ರತಾಪರೆಡ್ಡಿ

   

ಬಳ್ಳಾರಿ: ‘ಬಳ್ಳಾರಿಯಲ್ಲಿ ಗನ್‌ಮ್ಯಾನ್‌ಗಳ ಸಂಸ್ಕೃತಿ, ಫ್ಲೆಕ್ಸ್‌ ಸಂಸ್ಕೃತಿ ಇರಲಿಲ್ಲ. ಅದನ್ನು ಶುರು ಮಾಡಿದ್ದೇ ಗಾಲಿ ಜನಾರ್ದನ ರೆಡ್ಡಿ. ಆತನಿಂದಲೇ ಬಳ್ಳಾರಿ ಹೀಗಾಗಿದೆ’ ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ
ಬಳ್ಳಾರಿಯಲ್ಲಿ ಗನ್‌ಮ್ಯಾನ್ ಸಂಸ್ಕೃತಿ ಶುರುವಾಯಿತು. ಈ ಹಿಂದೆ ಎಂ.ಪಿ. ಪ್ರಕಾಶ್, ಎಂ.ವೈ. ಘೋರ್ಪಡೆ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಯಾವ ಹಿರಿಯ ನಾಯಕರೂ ಹತ್ತಾರು ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ’ ಎಂದರು.

ADVERTISEMENT

‘ಜನಾರ್ದನ ರೆಡ್ಡಿ ರಾಜಕೀಯ ಮುನ್ನೆಲೆಗೆ ಬರುತ್ತಿದ್ದಂತೆಯೇ ಜನವಿರೋಧಿ ಕಾರ್ಯಗಳು, ದೌರ್ಜನ್ಯಗಳು ಆರಂಭಗೊಂಡವು. ಅಕ್ರಮ ಗಣಿಗಾರಿಕೆ ನಡೆದವು. ಇದು ಇಡೀ ಬಳ್ಳಾರಿ ಜಿಲ್ಲೆಯ ಜನರಿಗೆ ಗೊತ್ತಿದೆ. ಯಾರಿಗೆ ಸಂಸ್ಕೃತಿ ಇಲ್ಲ, ಯಾರಿಗೆ ಸಂಸ್ಕಾರ ಇಲ್ಲ ಎಂಬುದನ್ನು ಈಗಾಗಲೇ ಬಳ್ಳಾರಿ ಜನ ನೋಡಿದ್ದಾರೆ’ ಎಂದು ಟೀಕಿಸಿದರು.

ಮೇಯರ್ ಗಾದೆಪ್ಪ, ಕಾಂಗ್ರೆಸ್ ಮುಖಂಡರಾದ ಎ.ಮಾನಯ್ಯ, ಮುಂಡರಗಿ ನಾಗರಾಜ್, ಎಲ್.ಮಾರೆಣ್ಣ, ಜಗನ್, ರಾಮ್ ಪ್ರಸಾದ್, ವೆಂಕಟೇಶ್ ಹೆಗಡೆ, ಕೆರಕೋಡಪ್ಪ, ವಿ.ಕೆ. ಬಸಪ್ಪ, ಎಚ್‌. ಸಿದ್ದೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.