
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬ್ಯಾಲಾಳು ಕೆರೆ ಮೊದಲ ಬಾರಿಗೆ ಅಪರೂಪದ ಬಾನಾಡಿಗಳಿಗೆ ಆಶ್ರಯ ನೀಡಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಕಲ್ಲು ಮರಳಿನ ಕೃತಕ ಹಾಸಿಗೆ ನಿರ್ಮಿಸಿದರೂ ಅತ್ತಕಡೆ ಸುಳಿಯದ ರಿವರ್ ಟರ್ನ್(ನದಿ ರೀವ) ಇಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಆವಾಸ ಮಾಡಿಕೊಂಡಿದೆ, ಐದಕ್ಕೂ ಹೆಚ್ಚು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
ಜತೆಯಲ್ಲಿ ಸ್ಪೂನ್‍ಬಿಲ್ಡ್ ಸ್ಟಾರ್ಕ್(ಚಮಚದ ಕೊಕ್ಕರೆ), ಕಾಮನ್ ಗ್ರೀನ್‍ಶ್ಯಾಂಕ್, ಯೆಲ್ಲೋ ವಾಗ್ಟೆಲ್ (ಹಳದಿ ಸಿಪಿಲೆ), ಕಾರ್ಮೋರೆಂಟ್ (ನೀರು ಕಾಗೆ), ಸ್ಪಾಟ್ ಬಿಲ್ಡ್ ಡಕ್ (ವರಟೆ ಬಾತು), ಪೈಯ್ಡ್ ಕಿಂಗ್‍ಫಿಶರ್ (ಕಪ್ಪುಬಿಳಿ ಮಿಂಚುಳ್ಳಿ) ಕೆರೆಯ ಮಧ್ಯಭಾಗದ ಗಿಡಗಳಲ್ಲಿ ವಿಶ್ರಮಿಸುತ್ತಿವೆ.
ಮಾಲವಿ ಜಲಾಶಯದಿಂದ ಸತತ ಎರಡು ತಿಂಗಳು ಕಾಲುವೆ ಮೂಲಕ ಕೆರೆಗೆ ನೀರು ಹರಿಸಲಾಗಿತ್ತು, ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಪಕ್ಷಿಗಳಿಗೆ ವರವಾಗಿ ಪರಿಣಮಿಸಿದೆ. ಅವುಗಳಿಗೆ ಅಗತ್ಯವಾದ ಆಹಾರವೂ ಇಲ್ಲಿ ದೊರೆಯುತ್ತಿದೆ, ಇದರಿಂದಾಗಿ ಬ್ಯಾಲಾಳು ಕೆರೆಗೆ ಮಹತ್ವ ಬಂದಿದೆ.
ಕೆರೆಗಳಲ್ಲಿನ ಗಿಡಮರಗಳಲ್ಲಿ ಸ್ಥಳೀಯ ಮತ್ತು ವಿದೇಶಿ ಹಕ್ಕಿಗಳ ಕಲರವ ಕೇಳಿಸುತ್ತಿದೆ, ಇದರಿಂದಾಗಿ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.