ADVERTISEMENT

ಕನ್ನಡ ವಿವಿ: ಜ್ಞಾನನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:33 IST
Last Updated 16 ಮೇ 2025, 14:33 IST
ಹೊಸಪೇಟೆ ಸಮೀಪದ ಹಂಪಿ ಕನ್ನಡ ವಿವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನನಮನ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಉಪನ್ಯಾಸ ನೀಡಿದರು
ಹೊಸಪೇಟೆ ಸಮೀಪದ ಹಂಪಿ ಕನ್ನಡ ವಿವಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನನಮನ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಉಪನ್ಯಾಸ ನೀಡಿದರು   

ಹೊಸಪೇಟೆ(ವಿಜಯನಗರ): ಕೆಳವರ್ಗದ ವಚನಕಾರರಿಂದ ಹೊಸ ದರ್ಶನ ಮಾಡಿಸಲು ಶೂನ್ಯ ಸಂಪಾದನೆಗಳು ಪ್ರಯತ್ನಿಸಿದ್ದು, ಶೂನ್ಯ ಸಂಪಾದನೆಗಳು ಮಹಿಳಾ ವಚನಕಾರ್ತಿಯರ ಘನತೆಯನ್ನು ಎತ್ತಿಹಿಡಿದಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನುಭವ ಮಂಟಪದ ಚರ್ಚೆಯಲ್ಲಿ ಸಂದರ್ಭಾನುಸಾರ ಸಂವಾದ ಸ್ವರೂಪದಲ್ಲಿ ವಚನಕಾರರು ಆಡಿದ ಮಾತುಗಳೇ ವಚನಗಳಾಗುತ್ತವೆ. ಶರಣರ ವಚನಗಳನ್ನು ಹೀಗೆಯೇ ಓದಿ ಎಂದು ಶಿವಗಣಪ್ರಸಾದಿ ಮಹಾದೇವಯ್ಯನವರು ಹೇಳಿದ್ದಾರೆ ಎಂದರು.

ADVERTISEMENT

ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ. ರವೀಂದ್ರನಾಥ, ಅಧ್ಯಾಪಕ ಪ್ರೊ.ಯರ‍್ರಿಸ್ವಾಮಿ, ಪ್ರೊ.ಡಿ. ಮೀನಾಕ್ಷಿ, ಶಕುಂತಲ, ಕೃಪಾಶಂಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.