ADVERTISEMENT

ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಪವಾಡ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 15:54 IST
Last Updated 1 ಏಪ್ರಿಲ್ 2025, 15:54 IST
ಹರಪನಹಳ್ಳಿ ತಾಲ್ಲೂಕು ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದ ಆರ್.ಜಗದೀಶ್ ಗೌಡ ಅವರನ್ನು ಹೊತ್ತು ಸಾಗಲು ಭಕ್ತರು ತಯಾರಿ ನಡೆಸಿರುವುದು.
ಹರಪನಹಳ್ಳಿ ತಾಲ್ಲೂಕು ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದ ಆರ್.ಜಗದೀಶ್ ಗೌಡ ಅವರನ್ನು ಹೊತ್ತು ಸಾಗಲು ಭಕ್ತರು ತಯಾರಿ ನಡೆಸಿರುವುದು.   

ಹರಪನಹಳ್ಳಿ: ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಮತ್ತು ಮುಳ್ಳಿನ ಪವಾಡ ವಿಜೃಂಭಣೆಯಿಂದ ಸೋಮವಾರ ಜರುಗಿತು.

ಹಬ್ಬಕ್ಕೂ ಮುನ್ನ ಮೂರು ದಿನ ಉಪವಾಸ ಕೈಗೊಳ್ಳುವ ಗ್ರಾಮದ ಆರ್.ಜಗದೀಶ ಗೌಡ ಅವರು ಗದ್ದುಗೆ ಮಂಟಪದ ಬಳಿ ನಿರ್ಮಿಸಿರುವ ಕಾರಿ ಮುಳ್ಳಿನ ಹಾಸಿಗೆ ನಿರ್ಮಿಸಿದ ಅಲಂಕೃತ ಪಲ್ಲಕ್ಕಿಯ ಮೇಲೆ ಸಂಜೆ 5.30ಕ್ಕೆ ಮಲಗಿಕೊಂಡರು. ಅವರನ್ನು ಹೊತ್ತು ಸಾಗಿದ ಭಕ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿ, ಓಕುಳಿ ( ಚಿಕ್ಕ ಹೊಂಡ) ಮೂರು ಪ್ರದಕ್ಷಿಣೆ ಹಾಕಲಾಯಿತು.

ಮುಳ್ಳಿನ ಮೇಲೆ ಮಲಗಿದ್ದ ಜಗದೀಶ್ ಗೌಡರು ಎಚ್ಚರಗೊಂಡು ಗದ್ದುಗೆಯಿಂದ ನಿರ್ಗಮಿಸಿದರು. ಉಪವಾಸ ಅಂತ್ಯಗೊಳಿಸಿದರು. ನಂತರ ಕಾಯಿ ಹರಿಯುವ ಆಚರಣೆ ಸಂಭ್ರಮದಿಂದ ನೆರವೇರಿತು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಗ್ರಾಮದ ನೂರಾರು ಭಕ್ತರು ಜಮಾಯಿಸಿದ್ದರು. ಸಂಜೆ ಆಂಜನೇಯ ಸ್ವಾಮಿ ರಥೋತ್ಸವ ನಡೆಯಿತು. ಬಣಕಾರ ರೇವಣಸಿದ್ದಪ್ಪ, ಚೆನ್ನನಗೌಡ, ಬಿ.ಕೆ.ಪ್ರಕಾಶ್, ಕರಿಬಸವನಗೌಡ, ತುಕ್ಕೇಶಪ್ಪ, ಹಾಗೂ ದೈವಸ್ಥರಿದ್ದರು.

ADVERTISEMENT
ಹರಪನಹಳ್ಳಿ ತಾಲ್ಲೂಕು ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದ ಆರ್.ಜಗದೀಶ್ ಗೌಡ ಅವರನ್ನು ಹೊತ್ತು ಸಾಗಲು ಭಕ್ತರು ತಯಾರಿ ನಡೆಸಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.