
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ: ಸಮೀಪದ ದೊಡ್ಡ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಪ್ಪ ಸಮುದಾಯ ಸಾಂಪ್ರದಾಯಿಕ ಸರಪಳಿ ಪವಾಡ ನಡೆಸಿ ಗಮನ ಸೆಳೆಯಿತು.
ಸಾಲುಗೊರವಪ್ಪರ ಮನೆತನದ ಕಂಚಿಕೇರಿ ವಂಶಸ್ಥರು ಸರಪಳಿ ಪವಾಡ ನಡೆಸಿದರು. ಕಬ್ಬಿಣದ ಚೈನ್ ಕೆಲವೇ ನಿಮಿಷಗಳಲ್ಲಿ ತುಂಡು ಮಾಡಿದ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಜಮಾಯಿಸಿದ್ದರು.
ದೇವಸ್ಥಾನದ ಧರ್ಮಕರ್ತರಾದ ದತ್ತಾತ್ರೇಯ ರಾವ್, ಕೋಟೇಶ್ವರ ರಾವ್, ವಿಶ್ವನಾಥರಾವ್, ಟಿ.ದಿವಾಕರ್, ಗಣಾಚಾರಿ ದುರುಗಪ್ಪ, ಕಾರ್ಣಿಕದ ಗೊರವಪ್ಪ, ಕೋಟೆಪ್ಪ, ಗೊರವಪ್ಪರಾದ ಹುಚ್ಚಪ್ಪ, ದೊಡ್ಡ ಮಲ್ಲಪ್ಪ, ಕೋಟೆಪ್ಪ, ಮೈಲಾರಪ್ಪ, ಚಂದ್ರಶೇಖರ, ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.