ADVERTISEMENT

ಹೊಸಪೇಟೆಯಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 13:16 IST
Last Updated 4 ಅಕ್ಟೋಬರ್ 2020, 13:16 IST
ಹೊಸಪೇಟೆ ನಗರ ಹಾಗು ಸುತ್ತಮುತ್ತಲು ಬಿರುಸಿನ ಮಳೆಯಾಗಿದೆ
ಹೊಸಪೇಟೆ ನಗರ ಹಾಗು ಸುತ್ತಮುತ್ತಲು ಬಿರುಸಿನ ಮಳೆಯಾಗಿದೆ   
""

ಹೊಸಪೇಟೆ: ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ.

ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮೋಡ ಕವಿದ ವಾತಾವರಣ ಇತ್ತು. ಬಳಿಕ ಬಿರು ಬಿಸಿಲು ಕಾಣಿಸಿಕೊಂಡಿತ್ತು. ಸಂಜೆ ಏಕಾಏಕಿ ಕಾರ್ಮೋಡ ಕವಿದು ಬಿರುಸಾಗಿ ಮಳೆ ಸುರಿಯಿತು.

ಸಂಜೆ ಐದು ಗಂಟೆಗೆ ಆರಂಭಗೊಂಡ ಮಳೆ ಬಿಡುವಿಲ್ಲದೆ ಗಂಟೆಗೂ ಹೆಚ್ಚು ಸಮಯ ಸುರಿಯಿತು. ಬಿರುಸಿನ ಮಳೆಗೆ ಪಟೇಲ್‌ ನಗರ, ಚಿತ್ತವಾಡ್ಗಿ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದವು. ರಸ್ತೆಯ ಮೇಲೆಲ್ಲ ನೀರು ನಿಂತುಕೊಂಡಿತ್ತು.

ADVERTISEMENT
ಹೊಸಪೇಟೆಯಲ್ಲಿ ಸುರಿದ ಭಾರಿ ಮಳೆ

ತಾಲ್ಲೂಕಿನ ಹಂಪಿ, ಕಡ್ಡಿರಾಂಪುರ, ಕಮಲಾಪುರ, ಧರ್ಮದಗುಡ್ಡ, ಕಾಳಘಟ್ಟ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.