ADVERTISEMENT

ತೆಕ್ಕಲಕೋಟೆ | ಎಡೆಬಿಡದೆ ಸುರಿದ ಮಳೆ: 7 ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:09 IST
Last Updated 28 ಸೆಪ್ಟೆಂಬರ್ 2025, 5:09 IST
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಸಿರಿಗೇರಿ ಗ್ರಾಮದ ಸಣ್ಣ ಮೌಲಾಸಾಬ್ ಇವರ ವಾಸದ ಮನೆ ಬಿದ್ದಿದೆ
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಸಿರಿಗೇರಿ ಗ್ರಾಮದ ಸಣ್ಣ ಮೌಲಾಸಾಬ್ ಇವರ ವಾಸದ ಮನೆ ಬಿದ್ದಿದೆ   

ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವದಿಂದ ಎಡೆಬಿಡದೆ ಮಳೆ ಸುರಿದಿದ್ದು, ಸಂಜೆವರೆಗೂ ಮುಂದುವರೆಯಿತು. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ಪೊಪ್ಪನಾಳ ಗ್ರಾಮದ ಬಸವನಗೌಡ, ಕರೂರು ಗ್ರಾಮದ ರಾಧ ಸ್ವಾಮಿ, ಶೇಖಣ್ಣ, ಸಿರಿಗೇರಿ ಗ್ರಾಮದ ಸಣ್ಣ ಮೌಲಸಾಬ್, ಉಪ್ಪಾರ ಹೊಸಳ್ಳಿ ಗ್ರಾಮದ ಎಲಿಗಾರ್ ವೀರಭದ್ರಗೌಡ, ದರೂರು ಗ್ರಾಮದ ರೋಶಪ್ಪ, ಭೈರಾಪುರ ಗ್ರಾಮದ ಆದೆಪ್ಪ ಇವರ ವಾಸದ ಮನೆ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ 7 ಮನೆಗಳು ಭಾಗಶಃ ಬಿದ್ದಿರುತ್ತವೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ.

ಉಪ್ಪಾರ ಹೊಸಳ್ಳಿ, ಬಲಕುಂದಿ, ನಿಟ್ಟೂರು, ಕರೂರು, ದೇವಿನಗರ, ಭೈರಾಪುರ, ಸಿರಿಗೇರಿ, ಎಂ.ಸುಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ADVERTISEMENT

ಭಾನುವಾರ ಮತ್ತು ಸೋಮವಾರ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ವಿವರ:

ತೆಕ್ಕಲಕೋಟೆ 5.58 ಸೆ.ಮೀ, ಸಿರಿಗೇರಿ 3.64 ಸೆ.ಮೀ, ಎಂ. ಸೂಗೂರು 4.24 ಸೆ.ಮೀ, ಕರೂರು 2.42 ಸೆ.ಮೀ, ಕುಡುದರ ಹಾಳು 8.30 ಸೆ.ಮೀ, ತಾಳೂರು 2.20 ಸೆ.ಮೀ ಮಳೆ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.