
ಪ್ರಜಾವಾಣಿ ವಾರ್ತೆ
ಕುಡತಿನಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ತಡ ರಾತ್ರಿ ಉತ್ತಮ ಮಳೆ ಸುರಿದಿದ್ದು, ಜೋರು ಗಾಳಿ, ಮಳೆಗೆ ಪಟ್ಟಣದ 8ನೇ ವಾರ್ಡ್‍ನ ರೇಣುಕಮ್ಮ ಅವರ ಸಿಮೆಂಟ್ ಶೀಟಿನ ಮನೆ ಸಂಪೂರ್ಣ ಕುಸಿದಿದೆ.
ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಧಾನ್ಯಗಳು, ಇತರೆ ವಸ್ತುಗಳಿಗೆ ಹಾನಿಯಾಗಿದೆ.
ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ, ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಸುರಿಯಿತು. ಗಾಳಿ ಆರ್ಭಟವೂ ಜೋರಾಗಿತ್ತು. ಮಳೆ ಮಾಪನ ಕೇಂದ್ರದಲ್ಲಿ 3.4 ಸೆಂ.ಮೀ ಮಳೆಯ ಪ್ರಮಾಣ ದಾಖಲಾಗಿದೆ. ರೈತರು ಜೋಳ ಸೇರಿದಂತೆ ಇತರೆ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.