ADVERTISEMENT

ತೆಕ್ಕಲಕೋಟೆ: ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 2:05 IST
Last Updated 10 ಜನವರಿ 2026, 2:05 IST
<div class="paragraphs"><p>ತೆಕ್ಕಲಕೋಟೆ ಪಟ್ಟಣದ ಶ್ರೀ ಹುಚ್ಚೀರಪ್ಪ ತಾತ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು</p></div>

ತೆಕ್ಕಲಕೋಟೆ ಪಟ್ಟಣದ ಶ್ರೀ ಹುಚ್ಚೀರಪ್ಪ ತಾತ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು

   

ತೆಕ್ಕಲಕೋಟೆ: ಪಟ್ಟಣದ 14ನೇ ವಾರ್ಡಿನ ಪಂಚಸ್ಥಳ ಹತ್ತಿರದ ಶ್ರೀ ಹುಚ್ಚೀರಪ್ಪ ತಾತ ದೇವಸ್ಥಾನದ 46ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಅದ್ದೂರಿಯಾಗಿ ಶುಕ್ರವಾರ ಸಂಜೆ ನೆರವೇರಿತು.

ಬೆಳಿಗ್ಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ಹಸೆಮಣೆ ಏರಿದವು.
ಸಂಜೆ 5.00 ಗಂಟೆಗೆ ಕೆ ಪಕ್ಕೀರಯ್ಯ ಇವರ ಮನೆಯಿಂದ ಹುಚ್ಚೀರಪ್ಪ ತಾತ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ತಾಷ-ತಪ್ಪಡಿ, ಸಮಾಳ ಹಾಗೂ ಸಕಲ ಮಂಗಳ ವಾದ್ಯದೊಂದಿಗೆ ನಡೆಯಿತು. ನಂತರ ಭಜನಾ ತಂಡದವರು ರಥಕ್ಕೆ ಹೂಮಾಲೆ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಭಕ್ತರು ಹೂ ಹಾಗೂ ಬಾಳೆಕಾಯಿ (ಓಣು) ರಥಕ್ಕೆ ಎಸೆದು ಹರಕೆ ತೀರಿಸಿದರು. ಜಾತ್ರೆ ಪ್ರಯುಕ್ತ ರಾತ್ರಿ 9.00 ಗಂಟೆಗೆ 'ಪಾಂಡುವಿಜಯ' ಬಯಲಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಎಚ್.ಕೆ. ತಿಮ್ಮಪ್ಪ ದೊಡ್ಡ ರುದ್ರಮ್ಮ, ಪಕ್ಕೀರಯ್ಯ, ಕೊಮಾರೆಪ್ಪ, ಪರಸಪ್ಪ, ಕಾಡಿಸಿದ್ದ ಪಟ್ಟಣ ಅಲ್ಲದೆ ಸುತ್ತಲಿನ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿ ಪುನೀತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.