ADVERTISEMENT

ಕಂಪ್ಲಿ: ವಿಶ್ವ ಶೌಚಾಲಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 5:25 IST
Last Updated 20 ನವೆಂಬರ್ 2025, 5:25 IST
ಕಂಪ್ಲಿಯಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಶೌಚಾಲಯ ದಿನಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ , ಪ್ರಮುಖರಾದ ಪ್ರಕಾಶಬಾಬು, ಜೀವನ್‍ಸ್ವಾತಿ, ಸಿ. ಜಾನಕಿ, ಗೌಡರ ನಾಗರತ್ನ, ಭೂಮಿಕಾ ಭಾಗವಹಿಸಿದ್ದರು
ಕಂಪ್ಲಿಯಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಶೌಚಾಲಯ ದಿನಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ , ಪ್ರಮುಖರಾದ ಪ್ರಕಾಶಬಾಬು, ಜೀವನ್‍ಸ್ವಾತಿ, ಸಿ. ಜಾನಕಿ, ಗೌಡರ ನಾಗರತ್ನ, ಭೂಮಿಕಾ ಭಾಗವಹಿಸಿದ್ದರು   

ಕಂಪ್ಲಿ: ‘ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನು ಆಚರಣೆ ಮಾಡಲಾಗುತ್ತದೆ’ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದಲ್ಲಿ ವಿಶ್ವ ಶೌಚಾಲಯ ದಿನ ಆಚರಣೆಗೆ ಬುಧವಾರ ಚಾಲನೆ ನೀಡಿ, ಸ್ವಚ್ಛತೆ, ಸಮಾಜದ ಆರೋಗ್ಯ, ಬಯಲು ಬಹಿರ್ದೆಸೆ ಮುಕ್ತ ಸಮಾಜದ ನಿರ್ಮಾಣ ಮತ್ತು ಪ್ರತಿಯೊಂದು ಕುಟುಂಬವೂ ಕಡ್ಡಾಯವಾಗಿ ಶೌಚಾಲಯವನ್ನು ಹೊಂದಬೇಕು ಎನ್ನುವುದು ಸರ್ಕಾರದ ಕಳಕಳಿಯಾಗಿದ್ದು, ಶೌಚಾಲಯ ನಿರ್ಮಿಸಿಕೊಳ್ಳುವ ಯೋಜನೆಯ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಪಟ್ಟಣದ 9ನೇ ವಾರ್ಡ್, ಜೆಸ್ಕಾಂ ಬಳಿಯ ಸಮುದಾಯ ಶೌಚಾಲಯ ಬಳಿ ಶೌಚಾಲಯ ದಿನ ಆಚರಿಸಿ ಕಾಲೊನಿ ಜನರಲ್ಲಿ ಅರಿವು ಮೂಡಿಸಲಾಯಿತು.

ADVERTISEMENT

ನೈರ್ಮಲ್ಯ ನಿರೀಕ್ಷಕರಾದ ಪ್ರಕಾಶಬಾಬು, ಜೀವನ್‍ಸ್ವಾತಿ, ಸಮುದಾಯ ಸಂಚಾಲಕರಾದ ಸಿ. ಜಾನಕಿ, ಗೌಡರ ನಾಗರತ್ನ, ಭೂಮಿಕಾ, ತಿಮ್ಮಮ್ಮ, ಎಚ್.ಎಂ. ಮೇಘಾ, ಪೌರ ಕಾರ್ಮಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.