
ಪ್ರಜಾವಾಣಿ ವಾರ್ತೆ
ಕಂಪ್ಲಿ: ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದ 42ನೇ ವರ್ಷದ ಶ್ರೀಲಕ್ಷ್ಮಿವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಬ್ರಹ್ಮೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಮಹಾಭಿಷೇಕ, ಲಕ್ಷ್ಮೀನಾರಾಯಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಇದಕ್ಕು ಮುನ್ನ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ, ಸನಾತನ ಧರ್ಮ ಸಂಸ್ಕೃತಿ, ಆಚಾರ ವಿಚಾರ ಪಾಲಿಸುವುದರ ಜೊತೆಗೆ ಗುರುಗಳ ಹಿತವಚನಗಳನ್ನು ಆಲಿಸಬೇಕು ಎಂದರು.
ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಭವ್ಯ ವಿಷ್ಣುರಾಜ್, ಹರಿಪ್ರಿಯ, ಆಶ್ವತ್ಥನಾರಾಯಣ, ಸರ್ವ ಸಮುದಾಯಗಳ ಭಕ್ತರು ಭಾಗವಹಿಸಿದ್ದರು.