ಕಂಪ್ಲಿ: ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್‌ನವರು ಗಂಗಾವತಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ ಪಟ್ಟಣದ ಎಂ.ಕೆ.ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಕುಮಿಟೆ(ವೈಟ್) ವಿಭಾಗದಲ್ಲಿ ಎ. ನಿಜಾಮುದ್ದೀನ್, ಕೆ. ಬಾಲಾಜಿ, ಡಿ. ದಕ್ಷಿತ್, ಅಖಿಲ್‍ಸಿಂಗ್, ಎನ್. ಅಬ್ದುಲ್‍ಖಾದರ್ ಜಿಲಾನ್ ಪ್ರಥಮ ಸ್ಥಾನ ಮತ್ತು ಎ. ಮಹ್ಮದ್, ಅಖಿಲ್, ರೂಪಾಶ್ರೀ, ವರ್ಷಾ, ಕಮಲಾಕರ್, ಪೃಥ್ವಿ ದ್ವಿತೀಯ ಸ್ಥಾನ ಗಳಿಸಿ ಪ್ರಮಾಣಪತ್ರ, ಟ್ರೋಫಿ ಪಡೆದಿದ್ದಾರೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.
ಉಚಿತ ತರಬೇತಿ: ಪಟ್ಟಣದ ಎಂ.ಕೆ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ಆತ್ಮರಕ್ಷಣೆ ಕಲೆ ಜಾಗೃತಿಗೊಳಿಸಲು ಸ್ಥಳೀಯ ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಳೆದ 17 ವರ್ಷಗಳಿಂದ ನಿತ್ಯ ಬೆಳಿಗ್ಗೆ 6ರಿಂದ 9ರವರೆಗೆ ಉಚಿತ ಕರಾಟೆ ತರಬೇತಿ ನೀಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಈ ಉಚಿತ ಕರಾಟೆ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಕರಾಟೆ ತರಬೇತುದಾರರಾದ ಎ. ಮಹ್ಮದ್ ಗೌಸ್ ಮತ್ತು ಕೇದಾರನಾಥ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.