ADVERTISEMENT

ಕೆಎಪಿಸಿಎಂಎಸ್: ಅವಿರೋಧ ಆಯ್ಕೆ

ಆಂಜನೇಯಲು ಅಧ್ಯಕ್ಷ, ಶರಭಣ್ಣ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 1:44 IST
Last Updated 18 ನವೆಂಬರ್ 2020, 1:44 IST
ಕಂಪ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಆಂಜನೇಯಲು, ಉಪಾಧ್ಯಕ್ಷರಾಗಿ ವಿ. ಶರಭಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಶಾಸಕ ಟಿ.ಎಚ್. ಸುರೇಶ್‍ಬಾಬು, ಸಂಘದ ನಿರ್ದೇಶಕರು ಹಾಜರಿದ್ದರು
ಕಂಪ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಆಂಜನೇಯಲು, ಉಪಾಧ್ಯಕ್ಷರಾಗಿ ವಿ. ಶರಭಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಶಾಸಕ ಟಿ.ಎಚ್. ಸುರೇಶ್‍ಬಾಬು, ಸಂಘದ ನಿರ್ದೇಶಕರು ಹಾಜರಿದ್ದರು   

ಕಂಪ್ಲಿ: ಕಂಪ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ(ಕೆಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಎನ್. ಆಂಜನೇಯಲು ಮತ್ತು ಉಪಾಧ್ಯಕ್ಷರಾಗಿ ವಿ. ಶರಭಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿ ಟಿ. ಕೃಷ್ಣನಾಯ್ಕ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಬಿ. ರಮೇಶ್, ಎಸ್. ಮಾರೇಶ್, ಎಚ್.ಎಂ. ಪ್ರಭುಸ್ವಾಮಿ, ಪಿ. ಚಂದ್ರಕಲಾ, ಜಿ. ಯರಿಸ್ವಾಮಿ, ಮಾಳಾಪುರ ದೇವೇಂದ್ರಗೌಡ, ವಿ. ಪ್ರಸಾದರಾವ್, ಮಂಜುನಾಥ ಗುಬಾಜಿ, ಕೆ. ವಿರುಪಾಕ್ಷಪ್ಪ, ಟಿ.ಎಂ. ಸಾವಿತ್ರಿ, ಸೂರಶೆಟ್ಟಿ ಜಯಲಕ್ಷ್ಮಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್‍ಬಾಬು ಮಾತನಾಡಿ, ‘ಈ ಭಾಗದ ರೈತರ ಬೇಡಿಕೆಯಂತೆ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಸರ್ಕಾರ ಆರಂಭಿಸಲಿದೆ’ ಎಂದು ತಿಳಿಸಿದರು.

ADVERTISEMENT

ಸಹಕಾರ ಸಂಘದ ವ್ಯವಸ್ಥಾಪಕ ಸಿದ್ದೇಶ್, ಮುಖಂಡರಾದ ಅಳ್ಳಳ್ಳಿ ವೀರೇಶ್, ಪಿ. ಬ್ರಹ್ಮಯ್ಯ, ಜಿ. ಸುಧಾಕರ, ಬಿ. ಸಿದ್ದಪ್ಪ, ಕಡೆಮನಿ ಪಂಪಾಪತಿ, ಎನ್. ಪುರುಷೋತ್ತಮ, ಎನ್. ರಾಮಾಂಜನೇಯಲು, ಎಚ್. ಲಿಂಗನಗೌಡ, ಡಾ. ವೆಂಕಟೇಶ್ ಭರಮಕ್ಕನವರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.