ಬಳ್ಳಾರಿ: ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿ ಜಯಶ್ರೀ ಕೆ. ಅವರು, ಈಚೆಗೆ ಬೆಂಗಳೂರಿನಲ್ಲಿ ನಡೆದ ಟ್ರೆಡಿಷನಲ್ ಶೋಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ನಾಟಕ ದಿ ಗ್ಲೋಬಲ್ ಅಕಾಡೆಮಿಯ ಕರಾಟೆ ಕಟಾಸ ಸ್ಪರ್ಧೆಯಲ್ಲಿ ಭಾಗವಹಿಸಿ ‘ದಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್’ ಪ್ರಶಸ್ತಿ ಪಡೆದಿದ್ದಾಳೆ.
ಕೆ.ಎಚ್. ಮೌನಿಕಗೆ ಬಹುಮಾನ: ಗೋಜಾರಿಯೋ ಕರಾಟೆ ಡು ಕೆನ್ರೋ ಖಾನ್ ಕರಾಟೆ ಸಂಸ್ಥೆಯಿಂದ ಹುಬ್ಬಳ್ಳಿ ತಾಲ್ಲೂಕಿನ ಗುಂಚಿ ಗ್ರಾಮದ ಬಸವೇಶ್ವರ ಭವನದಲ್ಲಿ ಈಚೆಗೆ ನಡೆದ ಎರಡನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿ ಕೆ.ಎಚ್. ಮೌನಿಕಗೆ ಬಹುಮಾನ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.