ADVERTISEMENT

ವೈದ್ಯ ಸುನೀಲ್‌ ಕುಮಾರ್‌ ಅಪಹರಣ ಪ್ರಕರಣ ಶೀಘ್ರ ಇತ್ಯರ್ಥ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 15:40 IST
Last Updated 28 ಜನವರಿ 2025, 15:40 IST
ಶೋಭಾರಾಣಿ ವಿ.ಜೆ 
ಶೋಭಾರಾಣಿ ವಿ.ಜೆ    

ಬಳ್ಳಾರಿ: ‘ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್‌ ಕುಮಾರ್‌ ಅಪಹರಣ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇನ್ನೆರಡು ದಿನದಲ್ಲಿ ಬೇಧಿಸಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ತಿಳಿಸಿದರು. 

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಪ್ರಕರಣದ ತನಿಖೆ ಅತ್ಯಂತ ತೀವ್ರವಾಗಿ ನಡೆಯುತ್ತಿದೆ. ಸೂಕ್ಷ್ಮ ಸಂಗತಿಗಳನ್ನೂ ಗಮನಿಸಲಾಗುತ್ತಿದೆ’ ಎಂದು ತಿಳಿಸಿದರು. 

ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ವಿಚಾರಣೆ ನಡೆಸುತ್ತಿರುವುದಾಗಿಯೂ, ಸ್ಥಳೀಯ ಪ್ರಭಾವಿಗಳ ಕೈವಾಡ  ಇರುವುದಾಗಿಯೂ ಸುದ್ದಿ ಹರಿಡಿತ್ತು. ಇದನ್ನು ಖಾತರಿಪಡಿಸದ ಎಸ್‌ಪಿ, ‘ಶೀಘ್ರವೇ ಎಲ್ಲವನ್ನೂ ಬಹಿರಂಗಪಡಿಸಲಾಗುವುದು’ ಎಂದು ಹೇಳಿದರು.

ADVERTISEMENT

ಜ.25ರ ಮುಂಜಾನೆ 6 ಗಂಟೆ ಸುಮಾರಿನಲ್ಲಿ ನಗರದ ಸತ್ಯನಾರಾಯಣ ಪೇಟೆ ಬಳಿ ವೈದ್ಯ ಸುನೀಲ್‌ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅದೇ ದಿನ ರಾತ್ರಿ ಕುರುಗೋಡು ಸಮೀಪದ ಸೋಮಸಮುದ್ರ ಬಳಿ ಬಿಟ್ಟು ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.