ADVERTISEMENT

ಬಳ್ಳಾರಿ ನಗರಕ್ಕೆ ಹತ್ತು ಹೊಸ ಬಸ್‌: ಇನಾಯತ್ ಬಾಗ್ ಬಾನ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:02 IST
Last Updated 19 ಫೆಬ್ರುವರಿ 2026, 2:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಳ್ಳಾರಿ: ಬಳ್ಳಾರಿ ವಿಭಾಗಕ್ಕೆ ನಗರ ಸಾರಿಗೆಯ 10 ಹೊಸ ಬಸ್ ಹಂಚಿಕೆಯಾಗಿದ್ದು, 7 ಮಾರ್ಗಗಳಲ್ಲಿ, 10 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ತಿಳಿಸಿದ್ದಾರೆ.

ಎಸ್.ಪಿ. ಸರ್ಕಲ್-ಅಲ್ಲಿಪುರ, ಎಸ್.ಪಿ. ಸರ್ಕಲ್- ಟ್ರಾಮ ಕೇರ್ ಸೆಂಟರ್, ಎಸ್.ಪಿ. ಸರ್ಕಲ್-ಬಂಡಿಹಟ್ಟಿ, ಎಸ್.ಪಿ. ಸರ್ಕಲ್- ಪ್ರಶಾಂತನಗರ ತಲಾ ಒಂದು, ಒಪಿಡಿ-ಬಿಸಿಲಹಳ್ಳಿ, ಒಪಿಡಿ-ಹುಸೇನ್ ನಗರ, ಹೊಸ ಬಸ್ ನಿಲ್ದಾಣ- ಸಂಗನಕಲ್ಲು ಮಾರ್ಗದಲ್ಲಿ ತಲಾ ಎರಡು ಬಸ್‌ಗಳು ಸಂಚರಿಸುತ್ತವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.