ADVERTISEMENT

ಕಠ್ಮಂಡು: ಕಂಪ್ಲಿಯ ಮೂವರು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:10 IST
Last Updated 11 ಸೆಪ್ಟೆಂಬರ್ 2025, 5:10 IST
<div class="paragraphs"><p>ನೇಪಾಳದ ಸೇನಾಪಡೆ</p></div>

ನೇಪಾಳದ ಸೇನಾಪಡೆ

   

–ಪಿಟಿಐ ಚಿತ್ರ

ಕಂಪ್ಲಿ: ಇಲ್ಲಿಯ ಪುರಸಭೆಯ 1ನೇ ವಾರ್ಡ್ ಸದಸ್ಯ ವಿ.ಎಲ್. ಬಾಬು, ಮಾಜಿ ಪುರಸಭೆ ಸದಸ್ಯ ವಿ.ವಿದ್ಯಾಧರ ಮತ್ತು ಮುಖಂಡ ಗೋಪಾಲ ಸೋಮವಾರ ನೇಪಾಳ ಪ್ರವಾಸಕ್ಕೆ ತೆರಳಿದ್ದು, ಸಂಬಂಧಿಕರಲ್ಲಿ ಮತ್ತು ಅವರ ಆಪ್ತವಲಯದಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಕರೆ ತರುವಂತೆ ಸ್ನೇಹಿತರ ಬಳಗವು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಕುರಿತು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಬುಧವಾರ ಸಂಜೆ ಪ್ರವಾಸಕ್ಕೆ ತೆರಳಿರುವ ಮೂವರೊಂದಿಗೆ ವಿಡಿಯೊ ಕಾಲ್ ಮೂಲಕ ಸಂಪರ್ಕಿಸಿ ಮಾತನಾಡಿದ್ದಾರೆ. ಸದ್ಯ ಅವರು ಕಠ್ಮಂಡುವಿನಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.