
ಕುರುಗೋಡು: ‘ಐತಿಹಾಸಿಕ ಮಹತ್ವ ಸಾರುವ ಕುರುಗೋಡು ದೇವಸ್ಥಾನಗಳು ಮತ್ತು ಕುರುಗೋಡು ಪಟ್ಟಣವನ್ನು ಹೆಲಿಕಾಪ್ಟರ್ ಮೂಲಕ ಆಗಸದಿಂದ ತೋರಿಸಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿರುವ ಕುರುಗೋಡು ಬೈಸ್ಕೈಗೆ ₹3,800 ದರ ನಿಗದಿಪಡಿಸಲಾಗಿದೆ’ ಎಂದು ನರಸಪ್ಪ ತಹಶೀಲ್ದಾರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ‘ಒಂದು ಹೆಲಿಕಾಪ್ಟರ್ ಮೂಲಕ ಫೆ.15 ಹಾಗೂ 16ರಂದು ಬೆಳಿಗ್ಗೆ 10 ಗಂಟೆಯಿಂದ ಸೇವೆ ಆರಂಭವಾಗಲಿದೆ’ ಎಂದರು.
ಬೆಳಿಗ್ಗೆ 7 ಗಂಟೆಗೆ ವದ್ದಟ್ಟಿ ಕ್ರಾಸ್‍ನಿಂದ ಮ್ಯರಾಥಾನ್ ಓಟ, ಬೆಳಿಗ್ಗೆ 8.30 ರಿಂದ ಮಿನಿ ವಿಧಾನಸೌಧದಿಂದ ಎತ್ತಿನಬಂಡಿ ಪ್ರದರ್ಶನ, ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿತ್ರಕಲಾ ಉತ್ಸವ, ಬೆಳಿಗ್ಗೆ 10 ಗಂಟೆಯಿಂದ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗ ಹವ್ಯಾಸಿ ಚಿತ್ರಕಲಾವಿದರ ಚಿತ್ರಕಲಾ ಉತ್ಸವ, ಬೆಳಿಗ್ಗೆ 10.30ಕ್ಕೆ ದೇವಸ್ಥಾನದಿಂದ ಸುಂಕಲಮ್ಮ ದೇವಸ್ಥಾನದವರಿಗೆ ರಸ್ತೆಯಲ್ಲಿ ರಂಗೋಲಿ ಉತ್ಸವ, 11.30ಕ್ಕೆ, ಬಾದನಹಟ್ಟಿ ರಸ್ತೆಯಲ್ಲಿ ಪುರುಷರಿಗೆ ಕೆಸರುಗದ್ದೆ ಓಟ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಮಧ್ಯಾಹ್ನ 2.30 ರಿಂದ ಸಿಂಧಿಗೇರಿ ರಸ್ತೆ ಗಾದಿಲಿಂಗಪ್ಪ ದೇವಸ್ಥಾನದಿಂದ ವಿವಿಧ ಕಲಾತಂಡಗಳ ಜನಪದ ವಾಹಿನಿ ಮೆರವಣಿಗೆ, ಮಧ್ಯಾಹ್ನ 3 ಗಂಟೆಗೆ ಆರತಿ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಆರತಿ ವೇದಿಕೆಯ ಸುತ್ತಮುತ್ತ ಸಾಮೂಹಿಕ ಭರತನಾಟ್ಯ ಉತ್ಸವ, ಸಂಜೆ 6.30ಕ್ಕೆ ಶಿವಬಸವ ಆರತಿ, ರಾತ್ರಿ 7ಕ್ಕೆ ಸಾಧಕರಿಗೆ ಸನ್ಮಾನ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.