ADVERTISEMENT

ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಪದವಿ ದಿನಾಚರಣೆ

500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 13:07 IST
Last Updated 23 ಅಕ್ಟೋಬರ್ 2021, 13:07 IST
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ದಿನಾಚರಣೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ದಿನಾಚರಣೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು   

ಹೊಸಪೇಟೆ(ವಿಜಯನಗರ): ‘ಯುವಕರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಯತ್ತ ಹೆಜ್ಜೆ ಹಾಕಿದರೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಸ್ವದೇಶಿ ವಸ್ತುಗಳ ಉತ್ಪಾದನೆಯ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ಜೆಎಸ್‌ಡಬ್ಲ್ಯೂ ಸ್ಟೀಲ್‌ ಘಟಕದ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ತಿಳಿಸಿದರು.

ನಗರದ ಪ್ರೌಢದೇವರಾಯತಾಂತ್ರಿಕಕಾಲೇಜಿನಲ್ಲಿ ಶನಿವಾರ ನಡೆದಪದವಿದಿನಾಚರಣೆಸಮಾರಂಭ ಉದ್ದೇಶಿಸಿ ಮಾತನಾಡಿದರು.

‘ಜಗತ್ತಿನಲ್ಲಿಹೆಚ್ಚುತ್ತಿರುವಜನಸಂಖ್ಯೆಯಿಂದಾಗಿ ಜಾಗತಿಕವಾಗಿ ಬೇಡಿಕೆಗಳು ಹೆಚ್ಚಾಗಿವೆ. ಅದರಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ADVERTISEMENT

ವೀರಶೈವವಿದ್ಯಾವರ್ಧಕಸಂಘದಅಧ್ಯಕ್ಷಗುರುಸಿದ್ದಸ್ವಾಮಿಮಾತನಾಡಿ, ‘ವಿದ್ಯಾರ್ಥಿಗಳು ಶ್ರಮಪಟ್ಟರೆಅದಕ್ಕೆತಕ್ಕಪ್ರತಿಫಲದೊರೆಯುತ್ತದೆ.ರಾಷ್ಟ್ರೀಯಶಿಕ್ಷಣನೀತಿಯ ಮೂಲಕ ವ್ಯಕ್ತಿತ್ವವಿಕಸನಹಾಗೂವಿವಿಧವಿಷಯಗಳನ್ನುಏಕಕಾಲಕ್ಕೆಕಲಿಯುವಅವಕಾಶ ಸಿಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅನುಕೂಲ’ ಎಂದರು.

ಕಾಲೇಜು ಆಡಳಿತಮಂಡಳಿಅಧ್ಯಕ್ಷಪಲ್ಲೇದದೊಡ್ಡಪ್ಪ, ಪ್ರಾಂಶುಪಾಲ ಎಸ್.ಎಂ. ಶಶಿಧರ್, ಕೆ.ಮಾಲತೇಶ್, ಎಂ.ಕೆ.ನಾಗರಾಜ್, ರವಿಕುಮಾರ್, ಕೆ.ಪೂರ್ಣಿಮಾ ಇದ್ದರು. 500ಕ್ಕೂಹೆಚ್ಚುಬಿಇ,ಎಂಟೆಕ್ಹಾಗೂಎಂಬಿಎ ವಿದ್ಯಾರ್ಥಿಗಳಿಗೆ ಪದವಿಪ್ರಮಾಣಪತ್ರವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.