ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದ ತುಲಾಭಾರ ಸ್ಮಾರಕದ ಬಳಿ ಭಾನುವಾರ ಸಂಜೆ ಚಿರತೆ ದಾಳಿ ನಡೆಸಿದ್ದರಿಂದ ಕುದುರೆ ಮರಿ ಗಂಭೀರವಾಗಿ ಗಾಯಗೊಂಡಿದೆ.
‘ತುಲಾ ಭಾರ ಸ್ಮಾರಕ ಬಳಿ ಕುದುರೆ ಮರಿ ಸುತ್ತಾಡುತ್ತಿತ್ತು. ಅದರ ಮೇಲೆ ಚಿರತೆ ಎರಗಿ ಬಿದ್ದದ್ದರಿಂದ ಕುದುರೆ ಕಿರುಚಾಡಲು ಶುರು ಮಾಡಿದೆ. ಅದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಗುಂಪಾಗಿ ದೌಡಾಯಿಸಿದ್ದಾರೆ. ಜನರನ್ನು ಕಂಡು ಚಿರತೆ ಕಾಲು ಕಿತ್ತಿದೆ. ಗಂಭೀರ ಗಾಯಗೊಂಡ ಕುದುರೆಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಪ್ರತ್ಯದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.