ADVERTISEMENT

ಗೋಡೆಹಾಳ್‌ ಚೆಕ್‌ಪೋಸ್ಟ್‌ ಮೇಲೆ ಲೋಕಾಯುಕ್ತ ದಾಳಿ: ಹಣ, ದಾಖಲೆ ವಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 6:21 IST
Last Updated 30 ಸೆಪ್ಟೆಂಬರ್ 2022, 6:21 IST
   

ಬಳ್ಳಾರಿ: ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿರುವ ಗೋಡೆಹಾಳ್ನಲ್ಲಿರುವ ಆರ್ಟಿಓ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಪುರುಷೋತ್ತಮ ಮತ್ತು ಡಿವೈ ಎಸ್ಪಿ ರಾಮರಾವ್ ನೇತೃತ್ವದ ತಂಡ ಇಂದು ಬೆಳಿಗ್ಗೆ 4.30 ಗಂಟೆಗೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆಯನ್ನು ಎರಡುವರೆ ತಾಸುಗಳ ಕಾಲ ಮಾಡಿದೆ. ಈ ಸಂದರ್ಭದಲ್ಲಿ ಹಣ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಲೋಕಾಯುಕ್ತ ದಾಳಿ ಮಾಡಿತ್ತು.

ಆಂಧ್ರಪ್ರದೇಶದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಗಡಿಭಾಗದಿಂದ ನಿತ್ಯ ನೂರಾರು ವಾಹನಗಳು ಬಳ್ಳಾರಿಗೆ ಎಂಟ್ರಿ ಕೊಡುತ್ತವೆ, ಇವುಗಳ ದಾಖಲೆ ಗಳ ಪರಿಶೀಲನೆಯ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ದಾಖಲೆಗಳನ್ನು ಸರಿಯಾಗಿ ಚೆಕ್‌ ಮಾಡುತ್ತಿಲ್ಲ, ತಪಾಸಣೆಯ ನೆಪದಲ್ಲಿ ಹಣ ಪಡೆಯುತ್ತಾರೆಂಬ ಎಂಬ ಆರೋಪದ ಹಿನ್ನಲೆ ಯಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ ಎಂದು ಹೇಳಾಗುತ್ತಿದೆ.

ಬಳ್ಳಾರಿಯಿಂದ ೧೨ ಕಿ.ಮೀ ದೂರದಲ್ಲಿರುವ ಚೆಕ್ಪೋಸ್ಟ್ನಲ್ಲಿ ಈ ಮೊದಲು ಗಣಿಗಾರಿಕೆ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಆರ್ಟಿಓ ಒಳಗೊಂಡಂತೆ ಕಾಂಪೋಜಿಟ್ ಚೆಕ್ಪೋಸ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲ ವರ್ಷಗಳಿಂದ ಇಲ್ಲಿ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದ ಹಿನ್ನಲೆಯಲ್ಲಿ ಇಲ್ಲಿ ಆರ್ಟಿಓ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು.

ADVERTISEMENT

ಇಂದು ಬೆಳಿಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳ ತಂಡವು ಅಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದೆ, ದಾಖಲೆ ಸೇರಿದಂತೆ ಇತರ ವಿಷಯದ ಕುರಿತಾಗಿ ಪರಿಶೀಲನೆ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಹಣವು ಸಿಕ್ಕಿದ್ದು, ಅಲ್ಲಿನ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ರಫೀಕ್ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ೧೨ ಜನರ ಇದ್ದರೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.