ADVERTISEMENT

ಸಂಡೂರು: ವಿಜೃಂಭಣೆಯಿಂದ ಜರುಗಿದ ಮಲಿಯಮ್ಮ ದೇವಿಯ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:55 IST
Last Updated 2 ಫೆಬ್ರುವರಿ 2026, 1:55 IST
ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಡಿ.ಅಂತಾಪುರ ಗ್ರಾಮದಲ್ಲಿ ಮಲಿಯಮ್ಮ ದೇವಿಯ ರಥೋತ್ಸವವು  ಭಾನುವಾರ ವಿಜೃಂಭಣೆಯಿಂದ ಜರುಗಿತು
ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಡಿ.ಅಂತಾಪುರ ಗ್ರಾಮದಲ್ಲಿ ಮಲಿಯಮ್ಮ ದೇವಿಯ ರಥೋತ್ಸವವು  ಭಾನುವಾರ ವಿಜೃಂಭಣೆಯಿಂದ ಜರುಗಿತು   

ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಡಿ.ಅಂತಾಪುರ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ಅಂಗವಾಗಿ ಮಲಿಯಮ್ಮ ದೇವಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಮಲಿಯಮ್ಮ ದೇವಿಯ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯ ಉತ್ಸವ ಮೂರ್ತಿಯನ್ನು ಮಹಾ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ  ದೇವಿಯ ರಥೋತ್ಸವ ನಡೆಯಿತು. 

ಚಿಕ್ಕಾಂತಾಪುರ, ಕೊಡಾಲು, ತುಮಟಿ, ವಿಠಲಾಪುರ, ಮಾಳಾಪುರ, ರಾಜಾಪುರ, ಮೆಟ್ರಿಕಿ, ಅವಿನಾಮಡುಗು, ಕೆರೆರಾಂಪುರ, ಕೊರವರಹಟ್ಟಿ, ಲಿಂಗದಹಳ್ಳಿ, ಸುಲ್ತಾನಾಪುರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ದೇವಿಗೆ ಬೆಳಗಿನ ಜಾವದಿಂದ ಬಿಲ್ವಪತ್ರೆ, ಎಲೆ ಪೂಜೆ, ಪಂಚಾಮೃತ ಅಭಿಷೇಕ ಮಾಡಲಾಯಿತು. ದೇವಿಗೆ ವಿವಿಧ ಹೂಗಳಿಂದ ವಿಶೇಷ ಆಲಂಕಾರ ಮಾಡಲಾಗಿತ್ತು.
ಗ್ರಾಮದ ಭಕ್ತಾದಿಗಳು ಬೆಳಿಗ್ಗೆ ದೇವಿಗೆ ಗಂಗೆಪೂಜೆ ನೆರವೇರಿಸಿ, ತನುಬಿಂದಿಗೆಯನ್ನು ತಂದರು. ಮಹಿಳೆಯರು ಸಾಮೂಹಿಕವಾಗಿ ಕುಂಬಗಳನ್ನು ಹೊತ್ತು ಸಾಗಿ ದೇವಿಗೆ ಭಕ್ತಿಯನ್ನು ಸಮರ್ಪಿಸಿದರು.

ADVERTISEMENT

ದೇವಿಯ ರಥಕ್ಕೆ ಗ್ರಾಮದ ಭಕ್ತರು ವಿವಿಧ ಹೂ, ಬಣ್ಣದ ಬಾವುಟ, ಬಾಳೆ ಎಲೆಗಳಿಂದ ಆಲಂಕಾರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.