ಸಂಡೂರು (ಬಳ್ಳಾರಿ): ತಾಲ್ಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿನ ಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಲ್ಲಿನ ಉಭಯ ದೇವರುಗಳ ಆರಾಧನೆಯನ್ನು ಉಲ್ಲೇಖಿಸುವ ಅಪರೂಪದ ಅಪ್ರಕಟಿತ ಮ್ಯಾಂಗನೀಸ್ ಶಾಸನ ಪತ್ತೆಯಾಗಿದೆ.
10 ಅಡಿ ಎತ್ತರವಿರುವ ಮ್ಯಾಂಗನೀಸ್ ಬಂಡೆಯಲ್ಲಿ 3 ಅಡಿ ಎತ್ತರ 3 ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ.
‘ಮರುಜನ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಶಾಸನ ಇದಾಗಿದ್ದು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ’ ಎಂದು ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ದೇಗುಲದ ಅರ್ಚಕ ಎಂ.ಎನ್.ವೀರಯ್ಯಸ್ವಾಮಿ, ಇತಿಹಾಸ ಉಪನ್ಯಾಸಕ ತಿಪ್ಪೇರುದ್ರ, ನಾಗಭೂಷಣ ಅವರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ.ತಿಪ್ಪೇಸ್ವಾಮಿ, ಗೋವಿಂದ, ಕೃಷ್ಣೆಗೌಡ, ತಿಮ್ಮಲಾಪುರದ ನರಸಿಂಹ, ವೀರಾಂಜಿನಯ್ಯ, ವೀರಭದ್ರಗೌಡ, ಎಚ್.ರವಿ ಶಾಸನ ಪತ್ತೆ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.