ADVERTISEMENT

ನಿಜವಾದ ಮಣ್ಣಿನ ಮಗ ಬಿ.ಸಿ. ಪಾಟೀಲ್‌ ಎಂದ ಸಚಿವ ಎಸ್.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 12:14 IST
Last Updated 19 ನವೆಂಬರ್ 2020, 12:14 IST
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್   

ಹೊಸಪೇಟೆ: ‘ರಾಜ್ಯದಲ್ಲಿ ನಿಜವಾದ ಮಣ್ಣಿನ ಮಗನೆಂದರೆ ಕೃಷಿ ಸಚಿವ ಬಿ.ಸಿ. ಪಾಟೀಲ್‌. ಅವರಿಗೆ ಮುಖ್ಯಮಂತ್ರಿ ಅರಣ್ಯ ಖಾತೆ ಕೊಟ್ಟಿದ್ದರು. ಆದರೆ, ಜನರೊಂದಿಗೆ ಬೆರೆತು ಕೆಲಸ ಮಾಡಲು ಆಗುವುದಿಲ್ಲ ಎಂದು ಕೃಷಿ ಖಾತೆ ಕೇಳಿ ಪಡೆದುಕೊಂಡರು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ತಿಳಿಸಿದರು.

‘ಮಣ್ಣಿನ ಮಕ್ಕಳು ಎಂದು ಕರೆಸಿಕೊಳ್ಳುವವರು ಇಂಧನ, ಲೋಕೋಪಯೋಗಿ ಕೇಳುತ್ತಾರೆ. ಅವರೆಲ್ಲ ತಂಪಾದ ಖಾತೆ ಕೇಳ್ತಾರೆ. ಆದರೆ, ಬಿ.ಸಿ. ಪಾಟೀಲ್ ಅದಕ್ಕೆ ತದ್ವಿರುದ್ಧ. ಕೃಷಿ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ನಂತರ ಮೊದಲ ಹಂತದಲ್ಲಿ 30 ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದಾರೆ. ಎರಡನೇ ಹಂತದಲ್ಲಿ ಐದಾರೂ ಜಿಲ್ಲೆ ಪ್ರವಾಸ ಮಾಡಿದ್ದಾರೆ. ಅವರಿಗೆ ಕೃಷಿ ಹಾಗೂ ಕೃಷಿಕರ ಮೇಲೆ ವಿಶೇಷ ಪ್ರೀತಿ ಇದೆ’ ಎಂದು ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹದಲ್ಲಿ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT