ADVERTISEMENT

ಹೊಸಪೇಟೆ: ರಾತ್ರಿಯಿಂದ ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 5:25 IST
Last Updated 24 ಜುಲೈ 2020, 5:25 IST
ಹೊಸಪೇಟೆ ನಗರದಲ್ಲಿ ಮಳೆ
ಹೊಸಪೇಟೆ ನಗರದಲ್ಲಿ ಮಳೆ   

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ‌ ಗುರುವಾರ ತಡರಾತ್ರಿ ಆರಂಭಗೊಂಡ ಮಳೆ ಶುಕ್ರವಾರ ಬೆಳಿಗ್ಗೆಯೂ ಮುಂದುವರಿದಿದೆ.

ತಡರಾತ್ರಿಯಿಂದ ನಸುಕಿನ ಜಾವದ ವರೆಗೆ ಸುರಿದ ಮಳೆ, ಕೆಲಕಾಲ ಬಿಡುವು ಕೊಟ್ಟು ಮತ್ತೆ ಸುರಿಯಲಾರಂಭಿಸಿದೆ.

ಮೂರ್ನಾಲ್ಕು ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ವಾತಾವರಣ ಸಂಪೂರ್ಣ ತಂಪಾಗಿದೆ. ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಧರ್ಮದಗುಡ್ಡ, ಹೊಸೂರು, ನಾಗೇನಹಳ್ಳಿ ಸೇರಿದಂತೆ ಹಲವೆಡೆ ವರ್ಷಧಾರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.