ಹರಪನಹಳ್ಳಿ: ಅಭಿವೃದ್ದಿ ಕೆಲಸ ಕೈಗೆತ್ತಿಕೊಂಡಾಗ ಸಾರ್ವಜನಿಕರು ಅಡ್ಡಿಪಡಿಸದೇ ಸಹಕರಿಸಬೇಕು ಎಂದು
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ಲೋಕೋಪಯೋಗಿ ಇಲಾಖೆ, ಅಪೆಂಡಿಕ್ಸ್ ಯೋಜನೆಯಡಿ ಗುರುವಾರ 2024-25ನೇ ಸಾಲಿನಲ್ಲಿ ₹4.50 ಕೋಟಿ ವೆಚ್ಚದ ಶಿವಮೊಗ್ಗ ಹೊಸಪೇಟೆ ರಾಜ್ಯ ಹೆದ್ದಾರಿ -25ರ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಿವಮೊಗ್ಗ ಹೊಸಪೇಟೆ ರಾಜ್ಯ ಹೆದ್ದಾರಿ 25ಕ್ಕೆ ಹೊಂದಿಕೊಂಡಿರುವ ನಂದಿಬೇವೂರು ಗ್ರಾಮದಲ್ಲಿ ₹4.50 ಕೋಟಿ ವೆಚ್ಚದ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಾಣ ಆಗುತ್ತದೆ. ಗ್ರಾಮಸ್ಥರು ಗುತ್ತಿಗೆದಾರರಿಗೆ ಸಹಕರಿಸಬೇಕು ಎಂದು ತಿಳಿಸಿದರು. ಒಂದು ವೇಳೆ ತಿಪ್ಪೆ ಹಾಕಿರುವುದು, ನಳಕ್ಕಾಗಿ ಗುಂಡಿ ಅಗೆದಿದ್ದರೆ ತೆರವುಗೊಳಿಸಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ ಮಾತನಾಡಿ, ದಿವಂಗತ ಎಂ.ಪಿ.ಪ್ರಕಾಶ್ ಅವರು ನಂದಿಬೇವೂರು ಗ್ರಾಮದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದರು.
ಇದಕ್ಕು ಮುನ್ನ ನಡೆದ ಮೆರವಣಿಗೆಯಲ್ಲಿ ಮಲೆನಾಡಿನ ಸುನಂದಾಶೆಟ್ಟಿ ಅವರ ತಂಡದ ಚಂಡೆಮದ್ದಳೆ ಗಮನ ಸೆಳೆಯಿತು. ಸುರಿವ ಮಳೆಯಲ್ಲೆ ಕಾರ್ಯಕ್ರಮ ನಡೆಯಿತು.
ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಂ.ಉದಯಶಂಕರ , ಮೈದೂರು ಒ.ರಾಮಪ್ಪ, ಬೋವಿ ಸಂಪತ್ ಕುಮಾರ, ಬೋವಿ ಮಂಜುನಾಥ, ಅಶೋಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಲುವಾದಿ ಪಾರ್ವತಮ್ಮ, ಉಪಾಧ್ಯಕ್ಷ ಸಿದ್ದೇಶ್ ಹಾವಿನ, ಜಗದೀಶಪ್ಪ, ಹಾಲಮ್ಮ , ಈ.ನಾಗರಾಜ್ ರಾಮಪ್ಪ, ಶಿವಕುಮಾರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.