ADVERTISEMENT

‘ವಿದ್ಯೆ, ಸಂಘಟನೆಗೆ ನಾರಾಯಣ ಗುರು ಒತ್ತು’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:45 IST
Last Updated 8 ಸೆಪ್ಟೆಂಬರ್ 2022, 16:45 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ವೀಣಾ ಈ. ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ವೀಣಾ ಈ. ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಭಾರತದ ದಾರ್ಶನಿಕರಲ್ಲಿ ಪ್ರಮುಖರಾಗಿರುವ ನಾರಾಯಣ ಗುರುಗಳು, ವಿದ್ಯೆ, ಸ್ವಾತಂತ್ರ್ಯ, ಸಂಘಟನೆಯೇ ಶಕ್ತಿ ಎಂದು ಹೇಳಿ ಅದನ್ನು ಎಲ್ಲೆಡೆ ಪ್ರತಿಪಾದಿಸಿದ್ದರು’ ಎಂದು ಗದುಗಿನ ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೀಣಾ ಈ. ತಿಳಿಸಿದರು.

ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಡಾ. ರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಮತ್ತು ಹೊಸಪೇಟೆಯ ವಿವೇಕ ವೇದಿಕೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಶ್ರೀ ನಾರಾಯಣ ಗುರು’ ಕುರಿತು ಉಪನ್ಯಾಸ ನೀಡಿದರು.

ನಾರಾಯಣ ಗುರು ಸಾಮಾಜಿಕ ಕಾಳಜಿಯುಳ್ಳವರಾಗಿದ್ದರು. ಸಮಾಜದ ಅನಿಷ್ಟ ಪದ್ಧತಿ, ತಾರತಮ್ಯ, ಮೂಢನಂಬಿಕೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು. ಮತ್ತು ಅಸಮಾನತೆ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿದರು. ಕೆಳ ವರ್ಗದವರಿಗೆ ಧಾರ್ಮಿಕ ಶಿಕ್ಷಣ ನೀಡಿದರು. ಶಿಕ್ಷಣದ ಮಹತ್ವ ಸಾರಿದ ಮಹಾನುಭಾವರು’ ಎಂದರು.

ADVERTISEMENT

ಕುಲಪತಿ ಪ್ರೊ.ಸ.ಚಿ. ರಮೇಶ, ನಾರಾಯಣ ಗುರುಗಳು ವಿವಿಧೆಡೆ ನಡೆದ ದೀನ–ದಲಿತರ ಹೋರಾಟದಲ್ಲಿ ಭಾಗವಹಿಸಿದ್ದರು. ಅನ್ಯಾಯದ ವಿರುದ್ಧ ಶ್ರಮ ಜೀವಿಗಳ ಚಳವಳಿ ಮುನ್ನಡೆಸಿದ್ದರು ಎಂದು ಹೇಳಿದರು.

ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ, ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ಯರ್ರಿಸ್ವಾಮಿ, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಯ ಸದಸ್ಯ ಬಸವರಾಜ ಪೂಜಾರ್, ಸಂಶೋಧನಾ ವಿದ್ಯಾರ್ಥಿನಿ ಕೆ.ಪುಷ್ಪ, ವಿವೇಕ ವೇದಿಕೆ ಸಂಚಾಲಕ ಅಭಿನಂದನ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.