ADVERTISEMENT

ಹಂಪಿ ನೋಡಿ ಬೆರಗಾದ ನೀತಿ ಆಯೋಗದ ಸಿಇಒ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 15:08 IST
Last Updated 8 ನವೆಂಬರ್ 2020, 15:08 IST
ರಾಷ್ಟ್ರೀಯ ‘ನೀತಿ’ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಅವರು ಭಾನುವಾರ ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿ, ಬಳಿಕ ಕಲ್ಲಿನ ರಥದ ಎದುರು ಛಾಯಾಚಿತ್ರ ತೆಗೆಸಿಕೊಂಡರು
ರಾಷ್ಟ್ರೀಯ ‘ನೀತಿ’ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಅವರು ಭಾನುವಾರ ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿ, ಬಳಿಕ ಕಲ್ಲಿನ ರಥದ ಎದುರು ಛಾಯಾಚಿತ್ರ ತೆಗೆಸಿಕೊಂಡರು   

ಹೊಸಪೇಟೆ: ‘ನೀತಿ’ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಅವರು ಕುಟುಂಬ ಸಮೇತ ಭಾನುವಾರ ಹಂಪಿಗೆ ಭೇಟಿ ನೀಡಿದರು.

ಬೆಳಿಗ್ಗೆ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಯೇ ಇರುವ ಪಂಪಾಂಬಿಕೆ, ಭುವನೇಶ್ವರಿ ದೇವಿಯ ದರ್ಶನ ಪಡೆದರು.

ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿನ ಸಪ್ತಸ್ವರ ಮಂಟಪ, ಕಲ್ಲಿನ ರಥ ಹಾಗೂ ಸುಂದರ ವಾಸ್ತುಶಿಲ್ಪ ಕಂಡು ಮನಸೋತರು. ಬಳಿಕ ಗಜಶಾಲೆ, ಕಮಲ ಮಹಲ್‌, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪ, ಕಡಲೆಕಾಳು ಗಣೇಶ, ಹೇಮಕೂಟ ನೋಡಿದರು.

ADVERTISEMENT

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು, ಸಿಬ್ಬಂದಿ ಸೋಮ್ಲಾ ನಾಯಕ, ಸುನೀಲ್‌ ಕುಮಾರ, ಎಂ.ಸಿ.ಎಚ್.ಆರ್. ದೇಸಾಯಿ, ಕೆ. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.