ಹಗರಿಬೊಮ್ಮನಹಳ್ಳಿ: ಅಮೆರಿಕ ಪ್ರವಾಸದಿಂದ ಗುರುವಾರ ರಾತ್ರಿ ಪಟ್ಟಣಕ್ಕೆ ಹಿಂತಿರುಗಿರುವ ಇಲ್ಲಿನ ಉದ್ಯಮಿ, ಅವರ ಪತ್ನಿ ಹಾಗೂ ಮಗಳಿಗೆ ಎರಡು ವಾರ ಮನೆಯಿಂದ ಹೊರಗೆ ಹೋಗದಂತೆ ತಹಶೀಲ್ದಾರ್ ಆಶಪ್ಪ ಪೂಜಾರ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
‘40 ಜನರ ತಂಡದೊಂದಿಗೆ ಯರ್ರಿಸ್ವಾಮಿ ಹಾಗೂ ಅವರ ಕುಟುಂಬದವರು ಅಮೆರಿಕ ಪ್ರವಾಸದಿಂದ ಹಿಂತಿರುಗಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿಯೇ ಅವರೆಲ್ಲರ ಗಂಟಲಿನ ದ್ರವ ಪಡೆದು ಪರೀಕ್ಷಿಸಲಾಗಿದೆ. ಎಲ್ಲರೂ ಸಹಜವಾಗಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ವಾರ ಮನೆಯಿಂದ ಹೊರಹೋಗದಂತೆ ತಿಳಿಸಲಾಗಿದೆ. ತಾಲ್ಲೂಕು ಆಡಳಿತದಿಂದಲೂ ಅವರ ಮೇಲೆ ನಿಗಾ ಇಡಲಾಗಿದೆ’ ಎಂದು ತಹಶೀಲ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗುರುವಾರ ರಾತ್ರಿ ಕೂಡ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ನಿತ್ಯವೂ ವೈದ್ಯರು ಅವರ ಮನೆಗೆ ಹೋಗಿ ಪರೀಕ್ಷೆ ನಡೆಸುವರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.