ADVERTISEMENT

ಹಂಪಿ ಹುಂಡಿಯಲ್ಲಿ ಹಳೆಯ ನೋಟುಗಳು!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2018, 14:42 IST
Last Updated 12 ಆಗಸ್ಟ್ 2018, 14:42 IST
ಸಾವಿರ ಹಾಗೂ ಐದು ನೂರು ಮುಖಬೆಲೆಯ ಹಳೆಯ ನೋಟುಗಳು
ಸಾವಿರ ಹಾಗೂ ಐದು ನೂರು ಮುಖಬೆಲೆಯ ಹಳೆಯ ನೋಟುಗಳು   

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ₨500, ₨1,000 ಮುಖಬೆಲೆಯ ಹಳೆಯ ನೋಟುಗಳು ಶನಿವಾರ ಪತ್ತೆಯಾಗಿವೆ.

ಐದು ನೂರು ಮುಖಬೆಲೆಯ ಹತ್ತು ನೋಟುಗಳು, ಸಾವಿರ ಮುಖಬೆಲೆಯ ಎರಡು ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿ ಹೋಗಿದ್ದಾರೆ. ₨10ರ ಒಂದು ಕಾಯಿನ್‌, ನಾಲ್ಕು ಡಾಲರ್‌ ಕೂಡ ಹಾಕಿದ್ದಾರೆ.

ಮಾರ್ಚ್‌ನಲ್ಲಿ ಹುಂಡಿ ಹಣ ಎಣಿಕೆ ವೇಳೆ ಎಂಟುವರೆ ಸಾವಿರ ಹಳೆಯ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳನ್ನು ರದ್ದುಪಡಿಸಿ ಎರಡು ವರ್ಷಗಳಾಗುತ್ತ ಬಂದರೂ ಭಕ್ತರು ಹುಂಡಿಯಲ್ಲಿ ಅವುಗಳನ್ನು ಹಾಕಿ ಹೋಗುವುದು ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.