ADVERTISEMENT

ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 2:55 IST
Last Updated 1 ಫೆಬ್ರುವರಿ 2026, 2:55 IST
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಶನಿವಾರ ಆರಂಭವಾದ ವೀರ ವನಿತೆ ಓಬವ್ವ ಉತ್ಸವವನ್ನು ಡಾ. ಶ್ರೀನಿವಾಸ್ ಎನ್.ಟಿ. ಹಾಗೂ ಗಣ್ಯರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಶನಿವಾರ ಆರಂಭವಾದ ವೀರ ವನಿತೆ ಓಬವ್ವ ಉತ್ಸವವನ್ನು ಡಾ. ಶ್ರೀನಿವಾಸ್ ಎನ್.ಟಿ. ಹಾಗೂ ಗಣ್ಯರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು   

ಕೂಡ್ಲಿಗಿ: ‘ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಸತತ ಮೂರನೇ ವರ್ಷವೂ ಒನಕೆ ಓಬವ್ವ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂಪಿ ಉತ್ಸವದಂತೆ ದೊಡ್ಡಮಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.

ಕೋಟೆಗಳ ನಾಡು, ಪಾಳೆಗಾರರ ನೆಲೆಬೀಡು ಹಾಗೂ ನಾಡಿನ ವೀರನಾರಿ ಒನಕೆ ಓಬವ್ವನ ತವರೂರು ತಾಲ್ಲೂಕಿನ ಗುಡೆಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಹಯೋಗದಲ್ಲಿ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವನ ಉತ್ಸವ ಉದ್ಘಾಟಿಸಿ ಮಾತನಾಡಿದರು.

‘ಹಿಂದುಳಿದ ಹೋಬಳಿ ಎಂಬ ಹಣೆಪಟ್ಟಿಯನ್ನು ತೆಗೆಯಲು ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಸಿದ್ದಯ್ಯ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ, ‘ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತಂದರೆ ಮಕ್ಕಳಲ್ಲಿ ಇತಿಹಾಸದ ಅರಿವು ಮೂಡಿಸಿದಂತಾಗುತ್ತದೆ’ ಎಂದು ಹೇಳಿದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಸಿದ್ದಯ್ಯ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ, ಕಾನಾಮಡಗು ದಾಸೋಹ ಮಠದ ಐಮಡಿ ಶಾರಣಾರ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಕೃಷ್ಣ, ಒನಕೆ ಓಬವ್ವ ವಂಶಸ್ಥರಾದ ಕುದುರೆಡವು ರಾಜಣ್ಣ, ಗುಡೇಕೋಟೆ ಪಾಳೇಗಾರ ವಂಶಸ್ಥ ಶಿವರಾಜ್ ವರ್ಮ, ಜರಿಮಲೆ ಪಾಳೆಯಗಾರ ವಂಶಸ್ಥರಾದ ಕೃಷ್ಣ ವರ್ಮ ರಾಜು, ದೊಡ್ಡ ದೊರೆ ಸಿದ್ದಪ್ಪ ನಾಯಕ, ಮುಖಂಡರಾದ ಎನ್.ಟಿ. ತಮ್ಮಣ್ಣ, ರಾಘವೇಂದ್ರರಾವ್, ರಾಜಣ್ಣ, ಗೊಂಚಿಗಾರ್ ಪವನ್ ಮಲ್ಲಿಕಾರ್ಜುನ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಜಿಲಾನ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಹ್ನಾವಿ, ತಹಶೀಲ್ದಾರ್ ವಿ.ಕೆ. ನೇತ್ರಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.