ADVERTISEMENT

ಹಂದಿ ದಾಳಿ: ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 0:59 IST
Last Updated 1 ಜೂನ್ 2021, 0:59 IST
ಕಮಲಾಪುರ ತಾಲ್ಲೂಕಿನ ಬೆಳಕೋಟಾದಲ್ಲಿ ಹಂದಿ ದಾಳಿಯಿಂದ ಗಾಯಗೊಂಡ ರೈತನಿಗೆ ಕಮಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು
ಕಮಲಾಪುರ ತಾಲ್ಲೂಕಿನ ಬೆಳಕೋಟಾದಲ್ಲಿ ಹಂದಿ ದಾಳಿಯಿಂದ ಗಾಯಗೊಂಡ ರೈತನಿಗೆ ಕಮಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು   

ಕಮಲಾಪುರ: ಹಂದಿ ದಾಳಿಯಿಂದ ರೈತನೊಬ್ಬ ತೀವ್ರ ಗಾಯಗೊಂಡ ಘಟನೆ ತಾಲ್ಲೂಕಿನ ಬೆಳಕೋಟಾ

ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಸವರಾಜ ಗುರುಲಿಂಗಪ್ಪ ಕವನಳ್ಳಿ ಗಾಯಗೊಂಡವರು. ಬೆಳಿಗ್ಗೆ ಕಬ್ಬಿಗೆ ನೀರುಣಿಸಲು ತೆರಳಿದ್ದು, ಒಳಗಿನಿಂದ ಬಂದ ಹಂದಿ ದಾಳಿ ಮಾಡಿದೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ಬಸವರಾಜ ನಿತ್ರಾಣ ಸ್ಥಿತಿಗೆ ತಲುಪಿದ್ದರು. ಹಿಂದಿನಿಂದ ಗುದ್ದಿರುವುದರಿಂದ ಸೊಂಟಕ್ಕು ಗಾಯಗಳಾಗಿವೆ. ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.