ADVERTISEMENT

ಜೋಳದರಾಶಿ ಗುಡ್ಡದಲ್ಲಿ ಪೊಲೀಸರ ಚಾರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 9:32 IST
Last Updated 5 ಫೆಬ್ರುವರಿ 2021, 9:32 IST
ಪೊಲೀಸರು ಶುಕ್ರವಾರ ಬೆಳಿಗ್ಗೆ ಹೊಸಪೇಟೆ ಹೊರವಲಯದ ಜೋಳದರಾಶಿ ಗುಡ್ಡ ಹತ್ತಿದರು
ಪೊಲೀಸರು ಶುಕ್ರವಾರ ಬೆಳಿಗ್ಗೆ ಹೊಸಪೇಟೆ ಹೊರವಲಯದ ಜೋಳದರಾಶಿ ಗುಡ್ಡ ಹತ್ತಿದರು   

ಹೊಸಪೇಟೆ: ಸ್ಥಳೀಯ ಪೊಲೀಸರು ಶುಕ್ರವಾರ ನಗರ ಹೊರವಲಯದ ಜೋಳದರಾಶಿ ಗುಡ್ಡ ಹತ್ತಿದರು.

ನಗರದ ಡಿವೈಎಸ್ಪಿ ಕಚೇರಿ ಬಳಿ ಸೇರಿದ ಪೊಲೀಸರು ಅಲ್ಲಿಂದ ಸಂಡೂರು ರಸ್ತೆಯ ಲಿಟ್ಲ್‌ ಫ್ಲವರ್‌ ಶಾಲೆಯ ವರೆಗೆ ವಾಕ್‌ ಮಾಡಿದರು. ನಂತರ ಅಲ್ಲಿಂದ ಗುಡ್ಡ ಹತ್ತಿದರು. ಬಿಳಿ ಬಣ್ಣದ ಟೀ ಶರ್ಟ್‌, ಖಾಕಿ ಪ್ಯಾಂಟ್‌ ಧರಿಸಿದ್ದ ಪೊಲೀಸರು ಚುಮು ಚುಮು ಚಳಿಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ಗುಡ್ಡ ಏರಿದರು. ದುರ್ಗಾ ಪಡೆಯ ಮಹಿಳಾ ಪೊಲೀಸರು ಇದ್ದರು.

ಗುಡ್ಡದ ತುತ್ತ ತುದಿಯಲ್ಲಿ ಸಮೂಹ ಛಾಯಾಚಿತ್ರ, ಸೆಲ್ಫಿ ತೆಗೆಸಿಕೊಂಡರು. ಕೆಲ ನಿಮಿಷ ವಿಶ್ರಾಂತಿ ಮಾಡಿದ ಪೊಲೀಸರು, ಪುನಃ ಬಂದ ಮಾರ್ಗದಲ್ಲೇ ಹಿಂತಿರುಗಿದರು.

ADVERTISEMENT

ಡಿವೈಎಸ್ಪಿ ವಿ. ರಘುಕುಮಾರ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ವಿ. ನಾರಾಯಣ, ಶ್ರೀನಿವಾಸ ಮೇಟಿ, ಶ್ರೀನಿವಾಸ, ಜಯಪ್ರಕಾಶ ಹಾಗೂ 120 ಜನ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.