ಹೊಸಪೇಟೆ: ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ತಾಲ್ಲೂಕಿನ ಹಂಪಿಯಲ್ಲಿ ಗುರುವಾರ ಪೊಲೀಸರಿಂದ ವಾಕಥಾನ್ ನಡೆಯಿತು.
ಹಂಪಿ ಡಿವೈಎಸ್ಪಿ ಕಾಶಿಗೌಡ ಅವರು ಕಮಲಾಪುರದಲ್ಲಿ ವಾಕಥಾನ್ ಗೆ ಚಾಲನೆ ನೀಡಿದರು.
ರಾಣಿ ಸ್ನಾನಗೃಹ, ಅಕ್ಕ ತಂಗಿಯರ ಗುಡ್ಡ, ಉದ್ದಾನ ವೀರಭದ್ರೇಶ್ವರ ದೇವಸ್ಥಾನ, ಸಾಸಿವೆಕಾಳು ಗಣಪ ಸ್ಮಾರಕ ಮೂಲಕ ಹಾದು ಎದುರು ಬಸವಣ್ಣ ಸ್ಮಾರಕದ ಬಳಿ ವಾಕಥಾನ್ ಕೊನೆಗೊಂಡಿತು.
ಕಮಲಾಪುರ ಠಾಣೆಯ ಪಿಎಸ್ಐ ಶಶಿಧರ, ಹಂಪಿ ಠಾಣೆಯ ರಾಮಣ್ಣ ನಾಯಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.