
ಹೊಸಪೇಟೆಯಲ್ಲಿ ಎಐಡಿಎಸ್‍ಒ ವತಿಯಿಂದ ಪ್ರತಿಭಟನಾ ಮೆರವಣಿಗೆ ಭಾನುವಾರ ನಡೆಯಿತು
ಹೊಸಪೇಟೆ (ವಿಜಯನಗರ): ‘ಸರ್ಕಾರ ಯಾವುದೇ ಶಾಲೆಯನ್ನು ಮುಚ್ಚಬಾರದು. ಸರ್ಕಾರಿ ಶಾಲೆಗಳ ವಿಲೀನ ನಿಲ್ಲಿಸಬೇಕು’ ಎಂದು ಸಾಹಿತಿ ಬಿ. ಪೀರ್ ಬಾಷಾ ಹೇಳಿದರು.
ನಗರದಲ್ಲಿ ಎಐಡಿಎಸ್ಒ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.
ಎಐಡಿಎಸ್ಒ ರಾಜ್ಯ ಘಟಕದ ಉಪಾಧ್ಯಕ್ಷ ಹಣಮಂತ ಮಾತನಾಡಿ, ‘ಸರ್ಕಾರವು ಜಾಗತಿಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳನ್ನು ತರುವ ಮುನ್ನ, ಈ ದೇಶದಲ್ಲಿ ಖಾಸಗಿ ಶಾಲೆಗಳು ಬಹುಪಾಲು ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ, ಈಗ ಜಾಗತಿಕ ಶಕ್ತಿಗಳ ಇಚ್ಛೆಯಂತೆ ಎಲ್ಲಾ ಸೇವಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ’ ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎನ್. ಪ್ರಮೋದ್, ಎಐಡಿವೈಒ ಉಪಾಧ್ಯಕ್ಷ ಎರ್ರಿಸ್ವಾಮಿ, ಎಐಎಂಎಸ್ಎಸ್ ಅಧ್ಯಕ್ಷ ಶಿವಮ್ಮ, ಎಐಡಿಎಸ್ಒ ಅಧ್ಯಕ್ಷ ರವಿಕಿರಣ್, ಉಮಾದೇವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.