ADVERTISEMENT

ಸಂಡೂರು: ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:08 IST
Last Updated 16 ಅಕ್ಟೋಬರ್ 2025, 4:08 IST
<div class="paragraphs"><p>ಬೀದಿ ನಾಯಿ</p></div>

ಬೀದಿ ನಾಯಿ

   

(ಸಾಂದರ್ಭಿಕ ಚಿತ್ರ)

ಸಂಡೂರು: ಪಟ್ಟಣದ 14ನೇ ವಾರ್ಡ್‍ನ ಹಳೆಚಪ್ಪರದಹಳ್ಳಿಯಲ್ಲಿ ಮಕ್ಕಳು ಸೇರಿ ಮೂವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಬುಧವಾರ ಜರುಗಿದೆ.

ADVERTISEMENT

14ನೇ ವಾರ್ಡ್‍ನ ನಿವಾಸಿಗಳಾದ ಮಾಜ್ತ್ (2), ಇಫ್ತರ್‍ಖಾನ್(3), ನಾಗರಾಜ್(50) ಮೂರು ಜನರು ಗಾಯಗೊಂಡ ವ್ಯಕ್ತಿಗಳಾಗಿದ್ದು, ವಾರ್ಡ್‍ನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ನಾಯಿಯು ಏಕಾಏಕಿ ದಾಳಿ ನಡೆಸಿದ್ದರಿಂದ ಮಕ್ಕಳ ತಲೆ, ಹೊಟ್ಟೆ ಇತರೆ ಭಾಗಗಳಲ್ಲಿ ಕಚ್ಚಿದೆ. ಮನೆಯ ಬಳಿ ಇರುವ ವ್ಯಕ್ತಿಯ ಮೇಲೆ ನಾಯಿ ದಾಳಿ ನಡೆಸಿ ತೊಡೆಯ ಭಾಗಗಕ್ಕೆ ಕಚ್ಚಿದೆ.
ಮೂರು ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

‘ಪಟ್ಟಣದಲ್ಲಿ ಬೀದಿ ನಾಯಿಗಳ, ಕೋತಿಗಳ ಹಾವಳಿಯು ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಭಯಪಟ್ಟು ಸಂಚರಿಸುತ್ತಿದ್ದಾರೆ. ಪುರಸಭೆಯ ಅಧಿಕಾರಿ, ಜನಪ್ರತಿನಿಧಿಗಳು ನಾಯಿಗಳ, ಕೋತಿಗಳ ಹಾವಳಿಯನ್ನು ತಡೆಯಬೇಕು’ ಎಂದು ಸಂಡೂರಿನ ನಿವಾಸಿ ಎಂ.ಖಲಂದರ್ ಬಾಷಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.