
ಪ್ರಜಾವಾಣಿ ವಾರ್ತೆ
ಬಳ್ಳಾರಿ: ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಜ.26ರಂದು ಬಳ್ಳಾರಿ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 8.20ಕ್ಕೆ ನಗರದ ರಾಜಕುಮಾರ್ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಬೆಳಿಗ್ಗೆ 8.30 ಗಂಟೆಗೆ ಎಚ್.ಆರ್. ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) 150 ಅಡಿ ಎತ್ತರದ ರಾಷ್ಟ್ರ ಧ್ವಜರೋಹಣ ನೆರವೇರಿಸುವರು.
ಬಳಿಕ ಬೆಳಿಗ್ಗೆ 8.50 ಗಂಟೆಗೆ ಬಿಎಂಸಿಆರ್‌ಸಿ ಕಾಲೇಜು ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು. ನಂತರ ಬೆಳಿಗ್ಗೆ 09 ಗಂಟೆಗೆ ಬಿಎಂಸಿಆರ್‌ಸಿ ಕಾಲೇಜು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಪಥಸಂಚಲನ ವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.