ಹೊಸಪೇಟೆ: ಅನಾರೋಗ್ಯದಿಂದ ಮೃತಪಟ್ಟಿರುವ ಬಸ್ ಚಾಲಕ ಜಗ್ಗಲ್ ತಮ್ಮಣ್ಣ (51) ಅವರ ಪತ್ನಿ ನೀಲವ್ವ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಶೀನಯ್ಯ ಅವರು ಬುಧವಾರ ₹3 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
‘ತಮ್ಮಣ್ಣ ಹೂವಿನಹಡಗಲಿ ಘಟಕದಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಅವರು ಸಾವನ್ನಪ್ಪಿದ್ದರು. ಸಾರಿಗೆ ಸಂಸ್ಥೆಯ ನಿಯಮದ ಪ್ರಕಾರ, ಆಂತರಿಕ ಗುಂಪು ವಿಮೆ ಯೋಜನೆಯ ಅಡಿಯಲ್ಲಿ ಪರಿಹಾರ ನೀಡಲಾಗಿದೆ’ ಎಂದು ಶೀನಯ್ಯ ತಿಳಿಸಿದರು. ಕಾರ್ಮಿಕ ಕಲ್ಯಾಣಾಧಿಕಾರಿ ಎಚ್. ಚಂದ್ರಶೇಖರ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.