ಕೊಟ್ಟೂರು: ತಾಲ್ಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶನಿವಾರ ಹೇಮರಡ್ಡಿ ಮಲ್ಲಮ ಜಯಂತಿ ಆಚರಿಸಲಾಯಿತು.
ರಡ್ಡಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಕೆ. ಭರಮರೆಡ್ಡಿ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಕೆ. ಅಮರೀಶ್, ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ, ಕಂದಾಯ ನಿರೀಕ್ಷಕ ಎಸ್.ಎಂ.ಹಾಲಸ್ವಾಮಿ, ಸಮಾಜದ ಕಾರ್ಯದರ್ಶಿ ರಾಮನಗೌಡ, ಉಪಾಧ್ಯಕ್ಷ ಗೂಳಿ ಮಲ್ಲಿಕಾರ್ಜುನ್, ಪಿ. ದೇವೇಂದ್ರಗೌಡ, ಖಜಾಂಚಿ ಎಸ್. ಕೊಟ್ರೇಶ್ ದೂಪದಹಳ್ಳಿ, ಕೋಡಿಹಳ್ಳಿ ಮಂಜುನಾಥ, ರೆಡ್ಡಿ ಗುರುಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.