
ಸಂಡೂರು: ‘ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಮಗ್ರ ಅಭಿವೃದ್ಧಿಗಾಗಿ ಸಂಡೂರು ಪಟ್ಟಣದಲ್ಲಿ ಶಿಕ್ಷಣ ಮಹಾ ವಿದ್ಯಾಲಯ, ನರ್ಸಿಂಗ್ ಕಾಲೇಜನ್ನು ಸರ್ಕಾರದ ವತಿಯಿಂದ ಶೀಘ್ರವಾಗಿ ಆರಂಭಿಸಲಾಗುವುದು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಹೇಳಿದರು.
ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಡಿಎಂಎಫ್ ಅನುದಾನದಲ್ಲಿ ₹75ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಗ್ರಾಮ ಪಂಚಾಯಿತಿಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಗ್ರಾಮದಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರದ ಅನುದಾನದಲ್ಲಿ ನೂತನ ಜನಸ್ನೇಹಿ ಗ್ರಾಮ ಸೌಧವನ್ನು ನಿರ್ಮಿಸಲಾಗಿದ್ದು, ತಾಲ್ಲೂಕಿನಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿಯಾಗಲು ಅಧಿಕಾರಿಗಳು ನಿರಂತರವಾಗಿ ಶ್ರಮಿಸಿಬೇಕು. ಕೃಷ್ಣಾನಗರ ಗ್ರಾಮದಲ್ಲಿ ಮುಸ್ಲಿಂ ಜನರ ಅಭಿವೃದ್ಧಿಗಾಗಿ ಮೂರು ಎಕರೆಯ ಜಮೀನಿನಲ್ಲಿ ಶಾದಿ ಮಹಲ್‍ನ್ನು ಅತಿ ತ್ವರಿತವಾಗಿ ಭೂಮಿ ಪೂಜೆ ನೆರವೇರಿಸಲಾಗುವುದು’ಎಂದರು.
ಅಧ್ಯಕ್ಷೆ ರೇಣುಕಾ ದೇವೆಂದ್ರಪ್ಪ, ಉಪಾಧ್ಯಕ್ಷೆ ಆಶಿಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ಸಹಾಯಕ ನಿರ್ದೇಶಕರಾದ ಮಹೇಶ್, ರೇಣುಕಾಚಾರ್ಯಸ್ವಾಮಿ, ಮುಖಂಡರಾದ ಸಿದ್ಧನಗೌಡ, ಜಿಲಾನ್, ಪಿಡಿಒ, ಕಾರ್ಯದರ್ಶಿ, ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.