ಸಂಡೂರು: ‘ಉತ್ತಮ ಆರೋಗ್ಯಕರ, ಸ್ವಚ್ಚ ಸಮಾಜ ನಿರ್ಮಾಣಕ್ಕಾಗಿ ಸಮಾಜದಲ್ಲಿನ ಎಲ್ಲ ಜನರ ಸಹಕಾರ ಬಹಳ ಮುಖ್ಯವಾಗಿದೆ’ ಎಂದು ಬಲ್ಡೋಟ ಸಮೂಹ ಗಣಿ ಕಂಪನಿಯ ವ್ಯವಸ್ಥಾಪಕ ರವಿ ಬಿಸುಗುಪ್ಪಿ ಹೇಳಿದರು.
ತಾಲ್ಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಬಲ್ಡೋಟ ಸಮೂಹ ಗಣಿ ಕಂಪನಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ನಗರ, ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರು ತಮ್ಮ ಮನೆಗಳ ಸುತ್ತಲೂ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದರು.
ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಶಾಲೆ, ರಸ್ತೆ, ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಸಸಿ ನೆಡಲಾಯಿತು.
ಕಂಪನಿಯ ಅಧಿಕಾರಿಗಳಾದ ದೇಬೆಶ್ಗೋ ಬಿಂದಾ ದಾಸ್, ಎ.ಲತೀಫ್, ಮಹೇಶ್ ಮಾನಕೇರಿ, ಅಶೋಕ ದೇಶಪಾಂಡೆ, ಅನಂತ ರಾಘವ್, ಬಸವಪ್ರಭು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.